ಸೇಡಂ:- ತಾಲೂಕಿನ ಮದನಾ ಸರಕಾರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಮೇಲ್ಛಾವಣಿ ಸೋರುತ್ತದೆ.ಇದರಿಂದ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.ಅಧಿಕಾರಿಗಳು ಕಣ್ಣು ಮುಚ್ಚಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದು ಅನುಮಾನವಿದೆ.
ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದಾಗ ಇಂತಹ ಪರಿಸ್ಥಿತಿ ತಮ್ಮ ಕಣ್ಣಿಗೆ ಕಾಣಿಸದೇ ಇರುವುದೇ.ಮಕ್ಕಳ ಜವಾಬ್ದಾರಿ ಅವರಿಗಿಲ್ಲವೇ.?ಹೀಗೆ ಅನೇಕ ಪ್ರಶ್ನೆಗಳು ಜನರಲ್ಲಿ ಮೂಡಿಬರುತ್ತಿವೆ.
ಇದೊಂದೇ ಶಾಲೆಯಷ್ಟೇ ಅಲ್ಲ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸರಕಾರಿ ಶಾಲೆಗಳ ಸ್ಥಿತಿ ಹೀಗೇನೇ ಇದೆ.ಮತ್ತು ಶಾಸಕರು ಯಾಕೆ ಗಮನ ಕೊಡುತ್ತಿಲ್ಲ.?ಅಂದರೆ ಶಾಲಾ ಮಕ್ಕಳಿಗೆ ಮತದಾನ ಹಕ್ಕು ಇರುವುದಿಲ್ಲ ಅದೇ ಕಾರಣ.?
ಸದ್ಯ ಇರುವ ಶಾಸಕರು ಅಷ್ಟೇ ಅಲ್ಲ ಈ ಹಿಂದೆ ಇರುವ ಶಾಸಕರಿಗೂ ಅನೇಕ ಬಾರಿ ಮನವಿ ನೀಡಲಾಗಿದೆ ಶಾಸಕರ ಮನಸು ಈ ಕಡೆ ನೋಡುತ್ತಿಲ್ಲ ಎಂದು ಕಾಣಿಸುತ್ತಿದೆ.
ಕೇವಲ ಪಟ್ಟಣಗಳಲ್ಲಿ ಇರುವ ಶಾಲೆಗಳು ಅಷ್ಟೇ ಅಲ್ಲ ಸರ್ ಸ್ವಲ್ಪ ಹಳ್ಳಿಗಳಲ್ಲಿನ ಶಾಲೆಗಳತ್ತ ಕೂಡ ಗಮನ ಕೊಡಿ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯಬೇಡಿ.
ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿರುವ ಪ್ರತಿ ಶಾಲೆಗೂ ಬೇಟಿ ನೀಡಲು ಅಧಿಕಾರಿಗಳಿಗೆ ತಿಳಿಸಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿ ಶಾಸಕರೇ ಎಂದು ಸ್ಥಳೀಯರ ಮನವಿ ಆಗಿರುತ್ತದೆ.
ಈ ಸಮಸ್ಯೆಯನ್ನು ಸಚಿವರಾದ ಮತ್ತು ಹಾಲಿ ಶಾಸಕರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.