ಬೆಂಗಳೂರು:– ನಮ್ಮ ಇತಿಹಾಸದ ಆಚರಣೆಗಳು ಪ್ರಚಲಿತ ಕಾಯಿದು ಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆ ಉಳಿಸಿ ಬೆಳೆಸುವ ನಮ್ಮ ಬಿಜೆಪಿ ನರಸಿಂಹಮೂರ್ತಿ ಮತ್ತು ಮುಖಂಡರು ಮಹಿಳೆಯರು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.
ಅವರು ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್,ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಮಾಜಿ ಅಧ್ಯಕ್ಷ ನಾಗೇಶ್, ಮೋಹನ್ ಕುಮಾರ್ ಟಿ.ವಿ ಶೋ, ರೂಂ, ಕೈಗಾರಿಕಾ ಉದ್ಯಮಿ ಹಾಗೂ ಬಿಜೆಪಿ ಮುಖಂಡ ದಿನೇಶ್, ಕಂಪ್ಯೂಟರ್ ವಿಜಯಕುಮಾರ್ ಇವರುಗಳ ನೇತೃತ್ವದಲ್ಲಿ,ಶ್ರೀರಾಮನ ದೇವಸ್ಥಾನ ಎದುರುಗಡೆ ಮುನಿಗಂಗಪ್ಪ ಮೈದಾನದಲ್ಲಿ ಬೃಹತ್ ಆಕಾರದ ಗಣೇಶೋತ್ಸವ ಆಯೋಜಿಸಿದ್ದ ಗಣೇಶನ ಸಂಬ್ರಮದಲ್ಲಿ ಪಾಲ್ಗೊಂಡು ಗಣೇಶನಿಗೆ ಪೂಜಾ ಪುನಸ್ಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಿಸಿ ಆಶಿರ್ವಾದ ಪಡೆದು ಸಾರ್ವಜನಿಕ ಅನ್ನದಾನ ನಿಯೋಗಕ್ಕೆ ಚಾಲನೆ ನೀಡಿದರು.
ನಂತರ ಸಾಯಂಕಾಲದ ಸಾಮೂಹಿಕ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ವಿವಿಧ ಕಲಾ ತಂಡಗಳಿಂದ ರಾಜಗೋಪಾಲ ನಗರ, ಪೀಣ್ಯ 2ನೇ ಹಂತ, ಹಾಲಿನ ಡೈರಿ, ಹೆಗ್ಗನಹಳ್ಳಿ, ವಿಷೇಶವಾಗಿ ಹೆಗ್ಗನಹಳ್ಳಿ ಕ್ರಾಸ್ ಸುಲಪುರದಮ್ಮ ದೇವಸ್ಥಾನ ರಸ್ತೆ ಮೂಲಕ ರಾಜಬೀದಿಗಳಲ್ಲಿ ವೀರಗಾಸೆ ನೃತ್ಯ ವಿವಿಧ ಪ್ರದರ್ಶನ ಡಿಜಿ ವಾಹನಗಳು ಹೀಗೆ ಅನೇಕ ರೂಪದಲ್ಲಿ ಗಣೇಶ ಮೆರವಣಿಗೆ ಸುಂಕದಕಟ್ಟೆ ಪೈಪ್ ಲೈನ್ ವರಿಗೆ ನಡೆಯಿತು. ಎಲ್ಲರೂ ಈ ಒಂದು ಕಾರ್ಯಕ್ಕೆ ಭಾಗವಹಿಸಿ ಕಣ್ಣು ತುಂಬಿಸಿಕೊಳ್ಳಿ ಗಣೇಶ ನ ದರ್ಶನಕ್ಕೆ ಪಾತ್ರರಾಗಿ ಎಂದು ಶಾಸಕ ಎಸ್ ಮುನಿರಾಜು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮತ್ತು ವಾರ್ಡಿನ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ವಿವಿಧ ಕಡೆಯಿಂದ ಕಲಾವಿದರು ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶೋತ್ಸವ ದಲ್ಲಿ ಪಾಲ್ಗೊಂಡು ದೇವರ ಸೇವೆಗೆ ಪಾತ್ರರಾದರು.
ವರದಿ:- ಅಯ್ಯಣ್ಣ ಮಾಸ್ಟರ್