ಚನ್ನಮ್ಮ ಕಿತ್ತೂರು:- ಬೆಳಗಾವಿ ಜಿಲ್ಲೆಯ ಕ್ರಾಂತಿ ನಾಡು ಕಿತ್ತೂರಿನಲ್ಲಿ. ಈಗ ಕಿತ್ತೂರು ವೀರರಾಣಿ ಚನ್ನಮ್ಮನವರ 200 ನೇ ವರ್ಷದ ವಿಜಯೋತ್ಸವದ ಸಂಭ್ರಮದ ಸಿದ್ಧತೆ. ಹೌದು ನಿನ್ನೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬರುವ ಶೆಟ್ಟರ್ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಉತ್ಸವ 2024 ಹಾಗೂ ಚನ್ನಮ್ಮನವರ 200 ನೇ ವರ್ಷದ ವಿಜಯೋತ್ಸವದ ಪೂರ್ವಭಾವಿ ಸಭೆಯು ಪೂಜ್ಯ ಶ್ರೀಗಳಾದ ಶ್ರೀ ಮಡಿವಾಳ ರಾಜಯೋಗಿನ್ದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅಧ್ಯಕ್ಷತೆಯಲ್ಲಿ,
ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್ , ಎಸ್.ಪಿ ಭೀಮಾ ಶಂಕರ ಗುಳೇಡ್, ಸಿ.ಇ. ಓ ರಾಹುಲ್ ಶಿಂದೆ ಸೇರಿದಂತೆ ಎಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ನೇರವೇರಿತು.
ಈ ಸಂದರ್ಭದಲ್ಲಿ ಸಾರ್ವಜನಿಕರ ಸಲಹೆಗಳನ್ನು ಸ್ವೀಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಬೆಳಗಾವಿ ಡಿ.ಸಿ ಮಹಮದ್ ರೋಷನ್, ಶಾಸಕ ಬಾಬಾ ಸಾಹೇಬ್ ಪಾಟೀಲ್, ಎಸ್.ಪಿ ಭೀಮಾ ಶಂಕರ ಗುಳೇಡ್, ಸಿ.ಇ. ಓ ರಾಹುಲ್ ಶಿಂದೆ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ರವರು ಉತ್ಸವದ ಸಿದ್ಧತೆ ಬಗ್ಗೆ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, Ac ಪ್ರಭಾವತಿ ಪಕಿರಪುರ, ac ಶ್ರವಣ ನಾಯಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ಎಸ್ ಸೊಬರದ, krddl ಕಾರ್ಯ ಪಾಲಕ ಅಭಿಯಂತರ ಶೆಗುಣಸಿ, ಕಿತ್ತೂರು ತಹಶೀಲ್ದಾರ್ ರವೀಂದ್ರ ಹಾದಿಮನಿ ಸೇರಿದಂತೆ ಹಲವಾರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸರ್ವ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ:- ಬಸವರಾಜು.