ಬೆಂಗಳೂರು : -ಪುರಾತನ ಕಾಲದಿಂದಲೂ ಭಕ್ತಿ ಭಾವ ಶ್ರದ್ಧೆ ಮತ್ತು ಕಷ್ಟ ಕಾರ್ಪಣ್ಯಗಳು ನಿವಾರಣೆಗೆ ಸಕಲ ದೇವಾನುದೇವತೆಗಳ ಪೂಜಿಸುವ ಭಾರತೀಯ ಸಂಸ್ಕೃತಿ ಸಂಪ್ರದಾಯ ನಮ್ಮದ್ದು ಎಂದು ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.
ಅವರು ಕೆಂಪೇಗೌಡ ಸರ್ಕಲ್ ವಿನಾಯಕ ನಗರ ಅಂದ್ರಹಳ್ಳಿ ಚಾಮುಂಡೇಶ್ವರಿ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಹಾಗೂ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಅದ್ದೂರಿ ಗಣೇಶೋತ್ಸವ ಹಾಗೂ ಪೌರ ಕಾರ್ಮಿಕರಿಗೆ ಉಡುಗೊರೆ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಶಾಸಕ ಎಸ್ ಟಿ ಸೋಮಶೇಖರ್ ಗಣೇಶನಿಗೆ ಪೂಜಾ ಪುನಸ್ಕಾರ ಸಲ್ಲಿಸಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್, ಸತೀಶ್ ಹೊಸಳ್ಳಿ, ಬೃಂದಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅರುಣ್ ಬೈಲಪ್ಪ, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ರೋಹಿಣಿ, ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಜನಾರ್ದನ್, ಮುಖಂಡರಾದ ಪ್ರಶಾಂತ್, ಗಿರೀಶ್, ಶ್ರೀನಿವಾಸ್, ನಾಗರಾಜ್, ಪ್ರವೀಣ್,ಅಂದ್ರಹಳ್ಳಿ , ವಿನಾಯಕ ನಗರ ಸೇರಿದಂತೆ ಸಮಸ್ತ ಹಿರಿಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಗಣೇಶೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ವರದಿ:- ಅಯ್ಯಣ್ಣ ಮಾಸ್ಟರ್