ಹುಬ್ಬಳ್ಳಿ : –ನಗರದ ಮಿನಿ ವಿಧಾನ ಸೌಧದ ಎದುರು ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯದ್ಯಂತ ಪೆನ್ ಡ್ರಾಪ್ ಹಾಗೂ ಆಪ್ ನಲ್ಲಿ ಕೆಲಸ ಸ್ಥಗಿತ ಗೊಳಿಸಿ ಧರಣಿಯಲ್ಲಿ ಭಾಗಿಯಾದರು.
ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಧಾರವಾಡ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷರು ಪರಮಾನಂದ ಶಿವಳ್ಳಿಮಠ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳ ಹೋರಾಟಕ್ಕೆ ಯಾವತ್ತೂ ಸಹಕಾರ ನೀಡುವುದಾಗಿ ಬೆಂಬಲ ಸೂಚಿಸಿದರಲ್ಲದೇ ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಐ ಎಫ್ ಅಯ್ಯನಗೌಡ್ರ, ಶಿರಸ್ತೇದಾರರಾದ ಬಾಲಚಂದ್ರ ಹೊಂಗಲ್, ಪಠಾಣ್, ಚಕ್ರಸಾಲಿ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ಎಲ್ಲರು ಬಾಹ್ಯ ಬೆಂಬಲ ಸೂಚಿಸಿದರು. ಗ್ರೇಡ್ ೨ ತಹಶೀಲ್ದಾರ್ ಜಿ ವಿ ಪಾಟೀಲ ರವರು ಬೆಂಬಲ ಸೂಚಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ನೌಕರರು ನಿರ್ವಹಿಸುತ್ತಿರುವ ೨೮ ತಂತ್ರಾಂಶ ಪ್ರಕಾರದ ಮೋಬೈಲ ಆದಾರಿತ ಮತ್ತು ಕಂಪ್ಯೂಟರ ಪ್ರೀಂಟ ಸ್ಕ್ಯಾನರ ಮತ್ತು ಇಂಟರರ್ನೇಟ ಆಧಾರಿತ ಕೆಲಸ ಕಾರ್ಯ ಆಗಿದ್ದು ಈ ಕೆಲಸ ನಿರ್ವಹಿಸಲು ಸರಕಾರದಿಂದ ಯಾವುದೆ ಮೂಲಭೂತ ಸೌಕರ್ಯ ಇಲ್ಲವಾಗಿದ್ದು, ಕಾರ್ಯ ಪ್ರಗತಿಗೆ ಪ್ರಗತಿ ಒತ್ತಡ ಹೇರುತ್ತಿದ್ದು ಸರಕಾರ ಎಲ್ಲ ಸೌಕರ್ಯ ನೀಡಿ ಹೆಚ್ಚು ಕೆಲಸ ತೆಗೆದುಕೊಳ್ಳಬೇಕೆಂದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ವಸ್ತ್ರದ, ಉಪಾಧ್ಯಕ್ಷ ನಿಂಗಪ್ಪ ಮುದ್ದಾಪುರ, ಜಿಲ್ಲಾ ಅಧ್ಯಕ್ಷ ಬ್ರಿಜೇಶ ಬಜೆಗಣ್ಣವರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಮ್ಮಾರ ಸೇರಿದಂತೆ ನೂರಾರು ಗ್ರಾಮ ಆಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ:- ಸುಧೀರ್ ಕುಲಕರ್ಣಿ