ಚಿಟಗುಪ್ಪ:- ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಚಿಟಗುಪ್ಪ ತಾಲೂಕು ಘಟಕ ವತಿಯಿಂದ ರಾಜ್ಯ ಸಂಘದ ಕಾರ್ಯಕಾರಿಣಿಯ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಿರ್ದಿಷ್ಟ ಅವಧಿ ಮುಷ್ಕರ ಕರೆ ನೀಡಿದ್ದ ಹಿನ್ನಲೆಯಲ್ಲಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ತಹಶಿಲ್ದಾರ ಕಚೇರಿಯ ಮುಂದೆ ಅನಿರ್ದಿಷ್ಟ ಅವಧಿಯವರೆಗೆ ಮೌನ ಪ್ರತಿಭಟನೆ ಮೂಲಕ ಮುಸ್ಕರ ಹಮ್ಮಿಕೊಂಡಿದ್ದರು.
ಮುಸ್ಕರದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜಯ್ಯ ಸಾಲಿಮಠ ಮಾಧ್ಯಮ ಜೊತೆಗೆ ಮಾತನಾಡಿ,ಗ್ರಾಮ ಆಡಳಿತ ಅಧಿಕಾರಿಗಳು ಒಂದೆಡೆಗೆ ಕುಳಿತುಕೊಂಡು ಕೆಲಸ ನಿರ್ವಹಿಸಲು ಕಚೇರಿಯಿಲ್ಲ,ಸೂಕ್ತವಾದ ಸಾಮಗ್ರಿಗಳು ಇಲ್ಲ,ಇದರಿಂದ ಒತ್ತಡ ಉಂಟಾಗುತ್ತಿದೆ,ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ಅಧ್ಯಕ್ಷ ಆದೇಶಕ್ಕಾಗಿ ಕಾದು ನೋಡಬೇಕಾಗಿದೆ ಎಂದು ಹೇಳಿದರು.
ಬಳಿಕ ಸಂಘದ ತಾಲೂಕು ಉಪಾಧ್ಯಕ್ಷ ರಮೇಶ ವಾಲಿಕರ ಮಾತನಾಡಿ,ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರಿಯಾದ ಪರಿಕರಗಳಿಲ್ಲ,ಅಲ್ಲದೆ ಸುಮಾರು 20 ವರ್ಷದಿಂದ ಅಂತರ ಜಿಲ್ಲಾ ವರ್ಗಾವಣೆಯಿಲ್ಲ,ಗ್ರಾಮ ಆಡಳಿತ ಅಧಿಕಾರಿಗಳಿಗೂ ಕುಟುಂಬ ಇದೆ,ಕುಟುಂಬ ಜೊತೆಗೆ ಬೇರೆಯುವ ಆಸೆಯಿದೆ.ಹೀಗಾಗಿ ಸರಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ನಿಂಗಪ್ಪ,ಪ್ರಧಾನ ಕಾರ್ಯದರ್ಶಿ ವಿಠಲ,ಖಜಾಂಚಿ ಮೃತುಂಜಯ, ಕಾನೂನು ಸಲಹೆಗಾರ ಕೇರೆಸಿದ್ದ,ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಸಿಎಂ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು,ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಭಾಗಿಯಾಗಿದ್ದರು.
ವರದಿ:- ಸಜೀಶ ಲಂಬುನೋರ್