Ad imageAd image

ತಾಲೂಕು ಆಡಳಿತದಿಂದ ಕಾರ್ಮಿಕರಿಗಾಗಿ ಒಂದು ದಿನದ ಕಾರ್ಯಗಾರ

Bharath Vaibhav
ತಾಲೂಕು ಆಡಳಿತದಿಂದ ಕಾರ್ಮಿಕರಿಗಾಗಿ ಒಂದು ದಿನದ ಕಾರ್ಯಗಾರ
WhatsApp Group Join Now
Telegram Group Join Now

ಮಾನ್ವಿ:– ಪಟ್ಟಣದ ತಾಲೂಕು ಪಂಚಾಯಿತಿ ಭವನದಲ್ಲಿ ತಾಲೂಕು ಆಡಳಿತ , ತಾಲೂಕಾ ಕಾನೂನು ಸೇವ ಸಮಿತಿ ,ತಾ.ನ್ಯಾಯವಾದಿಗಳ ಸಂಘ , ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಬಗ್ಗೆ ಹಾಗೂ ಯೋಜನೆಗಳು .

ಬಡತನ ನಿರ್ಮೂಲನೆ ಪರಿಣಾಮಕಾರಿ ಅನುಷ್ಠಾನದ ಕುರಿತು ನಡೆದ ಒಂದು ದಿನದ ಕಾರ್ಯಗಾರವನ್ನು ತಾ.ನ್ಯಾಯವಾದಿಗಳ ಸಂಘದ ತಾ.ಅಧ್ಯಕ್ಷರಾದ ರವಿಕುಮಾರಪಾಟೀಲ್ ಉದ್ಘಾಟಿಸಿ ಮಾತನಾಡಿ ನಮ್ಮ ಸಂವಿಧಾನದಲ್ಲಿ ಕಾರ್ಮಿಕರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ನೀಡಲಾಗಿದೆ ಹಾಗೂ ಸರಕಾರದಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಿಂದ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಾಗ ಮಾತ್ರ ಅವುಗಳ ಲಾಭವನ್ನು ಕಾರ್ಮಿಕರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಕಾರ್ಮಿಕರು ತಾಲೂಕಾ ಕಾನೂನು ಸೇವ ಸಮಿತಿಯ ಮೂಲಕ ಕಾನೂನಿನ ನೆರವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪರಿಣಾಮಕಾರಿಯಾಗಿ ಬಡತನ ನಿರ್ಮೂಲನೆ ವಿಷಯದ ಕುರಿತು ಹಿರಿಯ ನ್ಯಾಯವಾದಿಗಳಾದ ವಿಶ್ವನಾಥ ಪಾಟೀಲ್ ಉಪನ್ಯಾಸ ನೀಡಿದರು. ಹಿರಿಯ ನ್ಯಾಯವಾದಿಗಳಾದ ಗುಂಡಮ್ಮ ಮೇಟಿ, ಸ್ಟೇಲ್ಲಾ ಶಾರ್ಲೆಟ್ ಕಾರ್ಮಿಕ ಕಾನೂನುಗಳ ಬಗ್ಗೆ ಹಾಗೂ ಕಾರ್ಮಿಕರಿಗೆ ವಿಮೇ ಸೌಲಭ್ಯ ಕುರಿತು ರಾಯಚೂರಿನ ಎಲ್.ಐ.ಸಿ.ವ್ಯವಸ್ಥಾಪಕರಾದ ಮಧುಸೂಧನ್ ತಾಲೂಕು ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ ದೊರೆ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ವಿನಾಯಕರಾವ್, ತಾ.ಪಂ.ವ್ಯವಸ್ಥಾಪಕರಾದ ಬಸವರಾಜ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ .ಡಿ. ,ನಾಗರಾಜ,ಶ್ರೀಧರ ಸೇರಿದಂತೆ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳವರು ಕಾರ್ಮಿಕರು ಭಾಗವಹಿಸಿದರು.
ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಭವನದಲ್ಲಿ ಕಾರ್ಮಿಕರಿಗಾಗಿ ನಡೆದ ಒಂದು ದಿನದ ಕಾರ್ಯಗಾರವನ್ನು ತಾ.ನ್ಯಾಯವಾದಿಗಳ ಸಂಘದ ತಾ.ಅಧ್ಯಕ್ಷರಾದ ರವಿಕುಮಾರಪಾಟೀಲ್ ಉದ್ಘಾಟಿಸಿದರು.

ವರದಿ:-ಶಿವತೇಜ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!