ಸೇಡಂ:– ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ರಾಷ್ಟ್ರಕೂಟರ ಕೋಟೆ ರಕ್ಷಣೆ ಕೆಲಸ ಮಾಡಿ: ಸ್ವಾಮಿ ಹೇಳಿಕೆ.ಸೇಡಂ:- ತಾಲೂಕಿನ ಮಳಖೇಡ ಕೋಟೆಯು ಇಂದು ಮಳೆಯಿಂದ ಮತ್ತೆ ಕುಸಿತಗೊಂಡಿದೆ.
ಅತಿ ಶೀಘ್ರದಲ್ಲೇ ಕಾಮಗಾರಿ ನಡೆಸಿ ಇಲ್ಲ ಅಂದರೆ ನಮ್ಮ ಕೋಟೆಯು ಸಂಪೂರ್ಣವಾಗಿ ಬೀಳುವ ಹಂತದಲ್ಲಿದೆ ಬೀಳುವ ಗೋಡೆಗಳು ರಕ್ಷಿಸಿದರೆ ನಮ್ಮ ಮಳಖೇಡ ರಾಷ್ಟ್ರಕೂಟರ ಕೋಟೆ ಪ್ರವಾಸಿಗರಿಗೆ ನೋಡಲು ಅನುಕೂಲವಾಗುತ್ತದೆ ಹಾಗೂ ಇತಿಹಾಸ ಉಳಿದಂತೆ ಆಗುತ್ತದೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ವರದ ಸ್ವಾಮಿ ಬಿ ಹಿರೇಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ ನಿರ್ಮಿಸಿದ ಬೃಹತ್ ಕೋಟೆ ಇಂದು ಮಳೆಗೆ ಧರೆಗುರಲಿ ಬಿದ್ದಿದೆ.ಮೊದಲನೇ ಬಾರಿಗೂ ಬಿದ್ದಾಗ ಕಾಟಾಚಾರಕ್ಕೆ ಭೇಟಿಕೊಟ್ಟು ಕೈತೊಳೆದುಕೊಂಡು ಸೇಡಂ ತಾಲೂಕ ಆಡಳಿತವರ್ಗ ಹಾಗೂ ಕೋಟೆ ನವೀಕರಣ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿದೆ ಗುತ್ತಿಗೆದಾರನ ಮೇಲೆ (ಕ್ರಿಮಿನಲ್) ಭಾರತೀಯ ನ್ಯಾಯದಂಡ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಸ್ವಾಮಿ ಮನವಿ ಮಾಡಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.