Ad imageAd image

ಭೂಮಿಯಿಂದ ವಿಷ ಜತುಗಳು ಹೊರಗೆ ಬಂದು ಮನುಷ್ಯ ಕುಲದ ನಾಶವಾಗುತ್ತದೆ: ಕೋಡಿ ಶ್ರೀ 

Bharath Vaibhav
WhatsApp Group Join Now
Telegram Group Join Now

ಧಾರವಾಡ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಇಂದು ಕೂಡ ಮತ್ತೊಂದು ಸ್ಪೋಟಕವಾದ ಭವಿಷ್ಯ ನುಡಿದಿದ್ದಾರೆ.

ಭೂಮಿಯಿಂದ ಹೊರಬುರುವ ವಿಷಜಂತುಗಳು ಮನುಕುಲ ನಾಶ ಮಾಡಲಿವೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

ಧಾರವಾಡದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಭೂಮಿಯಿಂದ ವಿಷ ಜತುಗಳು ಹೊರಗೆ ಬರುತ್ತವೆ. ಅವುಗಳಿಂದ ಮನುಷ್ಯ ಕುಲ ನಾಶವಾಗುತ್ತದೆ. ಈ ವಿಷ ಜಂತುಗಳು ಮನುಷ್ಯರನ್ನ ನಾಶ ಮಾಡುತ್ತವೆ.

ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುವುದು ನಡೆದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ಯುದ್ಧ ಭೀತಿ ಇದೆ. ಜನರ ಶಾಂತಿ, ಸಹನೆ, ಆರೋಗ್ಯ ಕೆಡುತ್ತದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಇದೆ ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀಗಳು ಇದೀಗ ಜೀವರಾಶಿಗಳ ಮೇಲೆ ಉಂಟಾಗುವ ತೊಂದರೆಯ ಬಗ್ಗೆ ಸ್ಪೋಟಕ ಭಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಇನ್ನೂ ಮುಂದೆ ಹಿಂಗಾರು ಮಳೆ ಹೆಚ್ಚಿದೆ.

ಅದರಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಾವು ಹೇಳಿದ್ದ ಭವಿಷ್ಯವನ್ನು ಪುನಃರುಚ್ಚರಿಸಿದ್ದಾರೆ. ಮುಂದುವರೆದು, ವಿಷ ವಾಯು ಬೀಸಿದ್ದರಿಂದ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ. ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!