ಬೆಂಗಳೂರು:- ಪೀಣ್ಯ ದಾಸರಹಳ್ಳಿ: ವಡ್ಡ ಎಂಬ ಮಾತಿನ ನಿಂದನೆಯಿಂದ ಭೋವಿ ಜನಾಂಗದ ಸಮುದಾಯಕ್ಕೆ ಬಹಳ ಮುಜುಗರ ತಂದಿರುವ ಹುಲಿ ಕಾರ್ತಿಕ್ ರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿ ಎಂದು ಭಾರತೀಯ ಭೋವಿ ಸಮಾಜದ ಸೇವಾ ಸಂಘದ ಮಹಿಳಾ ರಾಜ್ಯಾದ್ಯಕ್ಷೆ ಎಂ ಆರತಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಾರದಲ್ಲಿ ಕಲರ್ಸ ಕನ್ನಡ ವಾಹಿನಿ ಅನುಬಂಧ ಹುಲಿ ಕಾರ್ತಿಕ್ ಎಂಬುವನ್ನು ಯಾವುದೋ ರೋಡ್‌ನಲ್ಲಿ ಬಿದ್ದಿರುವ ವಡ್ತಾ ಇದ್ದಾಂಗೆ ಇದ್ದಾನೆಂದು ಭೋವಿ ಜಾತಿಯನ್ನು ನಿಂದನೆ ಮಾಡಿದ್ದು ಈ ರೀತಿಯ ನಿಂದನೆಯಿಂದ ನಮ್ಮ (ಜನಾಂಗಕ್ಕೆ) ಸಮಾಜಕ್ಕೆ ಮುಜುಗರವಾಗಿದ್ದು, ಮಾನಸಿಕವಾಗಿ ನೊವುಂಟಾಗಿರುತ್ತದೆ. ಆದ್ದರಿಂದ ಈ ರೀತಿ ನಿಂದನೆ ಮಾಡಿದವರ ಮೇಲೆ ಶೀಘ್ರದಲ್ಲಿ ಕಾನೂನು ರೀತಿ ಕ್ರಮ ಕೈಗೊಂಡು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ಈ ಕೂಡಲೇ ಬಂಧಿಸಬೇಕೆಂದು ತಮ್ಮಲ್ಲಿ ಜನಾಂಗದ ವತಿಯಿಂದ ದೂರು ನೀಡುತ್ತಿದ್ದೇವೆ.
ಈಗಾಗಲೇ ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಆಖಿಲ ಕರ್ನಾಟಕ ಭೋವಿ ಯುವ ವೇದಿಕೆ ರಾಮನಗರ ಶಾಖೆ ದೂರು ದಾಖಲಿಸಿದ್ದು ಅವರ ಕ್ರಮ ಕೈಗೊಳ್ಳದಿದ್ದರೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಆಡಿ ದೂರು ನೀಡುವ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆರತಿ ಎಂ ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯ ,ರಾಜ್ಯಾದ್ಯಕ್ಷ ಬಿ ಎನ್ ಜಗನ್ನಾಥ್,ಸಂಘದ ಸದಸ್ಯರು ಮತ್ತು ಸಮಾಜದ ಹಿರಿಯ ಮುಖಂಡರು ಮಹಿಳೆಯರು ಮುಂತಾದವರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್