ವಿಜಯಪುರ: ಕಾಂಗ್ರೆಸ್ ಸರ್ಕಾರ ಉರುಳಿಸಲು ಕೆಲವರು ಯತ್ನ ಮಾಡುತ್ತಿದ್ದು, ಇದಕ್ಕಾಗಿ 1 ಸಾವಿರ ಕೋಟಿ ಮೀಸಲು ಇಟ್ಟಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿಯಲ್ಲಿ ರಣ ತಂತ್ರ ನಡೆಯುತ್ತಿದೆ.ಎಷ್ಟೋ ಮಂದಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವುದಿರುತ್ತದೆ. ಅದಕ್ಕಾಗಿ ಎಷ್ಟೋ ಮಂದಿ ಈಗಾಗಲೇ ಸಿಎಂ ಆಗಲು 1 ಸಾವಿರ ಕೋಟಿ ರೂ. ರಿಸರ್ವ್ ಮಾಡಿಟ್ಟಿದ್ದಾರೆ. ಸರ್ಕಾರ ಒಡೆದು ಸಿಎಂ ಆಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೊಸಬಾಂಬ್ ಹಾಕಿದ್ದಾರೆ.
ಡಿಸೆಂಬರ್ನಲ್ಲಿ ಕ್ರಾಂತಿಯಾಗುತ್ತದೆ ಅಂತ ಕಾಯುತ್ತಿದ್ದಾರೆ. ಇದಕ್ಕೆ ಸಾವಿರ ಕೋಟಿ ರೂ. ಇಟ್ಕೊಂಡಿದ್ದಾರೆ. ಇದಕ್ಕೆ ನಮ್ಮದು ಒಪ್ಪಿಗೆಯಿಲ್ಲ. ಮತ್ತೆ ಚುನಾವಣೆ ಬರಬೇಕು, ಆಗ ನಾವು ಬಹುಮತದಿಂದ ಗೆದ್ದು ಸರ್ಕಾರ ರಚಿಸಬೇಕು ಎನ್ನುವುದು ನನಗಿದೆ ಎಂದರು.