Ad imageAd image

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂ. ಏರಿಕೆ 

Bharath Vaibhav
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48 ರೂ. ಏರಿಕೆ 
GAS
WhatsApp Group Join Now
Telegram Group Join Now

ನವದೆಹಲಿ : ದಸರಾ ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಬಿಗ್ ಶಾಕ್. ಇಂದಿನಿಂದ ದೇಶಾದ್ಯಂತ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿವೆ.

LPG ಸಿಲಿಂಡರ್‌ಗಳ ಹೊಸ ದರಗಳನ್ನು ಇಂದು ಅಕ್ಟೋಬರ್ 1 ರಂದು ಬಿಡುಗಡೆ ಮಾಡಲಾಗಿದೆ. ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಗೆ ಮುನ್ನವೇ ಗ್ರಾಹಕರು ಹಣದುಬ್ಬರದಿಂದ ತತ್ತರಿಸಿದ್ದಾರೆ.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಸುಮಾರು 48.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 1740 ರೂ.ಗೆ ಲಭ್ಯವಾಗಲಿದೆ. ಇಂಡೇನ್ ಸಿಲಿಂಡರ್‌ಗೆ ಈ ದರವಿದೆ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ, ಅಕ್ಟೋಬರ್ 1, 2024 ರಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮುಂಬೈನಲ್ಲಿ ರೂ 1692.50 ಆಗಿರುತ್ತದೆ, ಕೋಲ್ಕತ್ತಾದಲ್ಲಿ ಇದು ರೂ 1850.50 ಮತ್ತು ಚೆನ್ನೈನಲ್ಲಿ ರೂ 1903 ಆಗಿರುತ್ತದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಸಹ ಎಲ್‌ಪಿಜಿ ಸಿಲಿಂಡರ್ ದರ ಸುಮಾರು 39 ರೂಪಾಯಿ ಏರಿಕೆಯಾಗಿ 1691.50 ರೂಪಾಯಿಗೆ ತಲುಪಿತ್ತು.

ತೈಲ ಕಂಪನಿಗಳು ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ, ಈ ಗ್ಯಾಸ್ ಸಿಲಿಂಡರ್‌ಗಳು ಈಗ 48.50 ರೂ. ದುಬಾರಿಯಾಗಲಿವೆ. ಆದರೆ, 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ವಾಣಿಜ್ಯ ಸಿಲಿಂಡರ್‌ನ ಇತ್ತೀಚಿನ ದರ ಎಷ್ಟು?

ದೆಹಲಿ – 1740 ರೂ

ಕೋಲ್ಕತ್ತಾ – 1850.50 ರೂ

ಮುಂಬೈ – 1692.50 ರೂ

ಚೆನ್ನೈ – 1903.50 ರೂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!