Ad imageAd image

ಚಿಕ್ಕೋಡಿ ಪ್ರತ್ಯಕ್ಷ ಜಿಲ್ಲೆ ಹೋರಾಟಗಾರರ ಸಮಿತಿಗೆ ಅಭಿನಂದನೆಗಳ ಅರ್ಪಣೆ.

Bharath Vaibhav
ಚಿಕ್ಕೋಡಿ ಪ್ರತ್ಯಕ್ಷ ಜಿಲ್ಲೆ ಹೋರಾಟಗಾರರ ಸಮಿತಿಗೆ ಅಭಿನಂದನೆಗಳ ಅರ್ಪಣೆ.
WhatsApp Group Join Now
Telegram Group Join Now

ಚಿಕ್ಕೋಡಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ, ಲಕ್ಷ್ಮೀ ಹೆಬ್ಬಾಳರ ಇವರಿಗೆ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಅಭಿನಂದನೆಗಳ ಅರ್ಪಣೆ.

ಬೆಳಗಾವಿ ಜಿಲ್ಲೆ ವಿಭಜನೆ ಆದರೆ ಮಾತ್ರ ಅಭಿವೃದ್ಧಿ ಸಾಧ್ಯ, ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮತ್ತೆರಡು ಹೊಸ ಜಿಲ್ಲೆಗಳನ್ನು ಮಾಡಬೇಕು ಎಂದು, ಸಚಿವರು ಸರಕಾರಕ್ಕೆ ಒತ್ತಡ ಹಾಕುತ್ತಿರುವುದನ್ನು ಗಮನಿಸಿದ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಇವರು, ತಮ್ಮ ನೇತೃತ್ವದಲ್ಲಿ ನಿಯೋಗ ಒಂದನ್ನು ನಿರ್ಮಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಇವರಿಗೆ ಭೆಟ್ಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು,

ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಶತಸಿದ್ಧ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ನಾವು ಪಡೆಯುವುದೇ ಇಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ 25 ವರ್ಷಗಳ ನಮ್ಮ ಹೋರಾಟಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಸಾಹೇಬರು ಸ್ಪಂದಿಸಿ, ಈಗಾಗಲೇ ಚಿಕ್ಕೋಡಿ ಜಿಲ್ಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ,

ಹೆಬ್ಬಾಳಕರ ಸಚಿವರು ಸಹ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿರುವುದರಿಂದ ನಮ್ಮ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು, ಸಂಜು ಬಡಿಗೇರ ಮಾತನಾಡಿ ನಮ್ಮ ಜಿಲ್ಲೆ ಬೇರೆ ಜಿಲ್ಲೆಗಳಂತೆ ಅಭಿವೃದ್ಧಿ ಕಂಡಿಲ್ಲ, ಏಕೆಂದರೆ ಹೆಚ್ಚು ಕ್ಷೇತ್ರ ಹಾಗೂ ಹೆಚ್ಚು ಜನಸಂಖ್ಯೆ ಇದೆ, ಅನುದಾನದ ಕೊರತೆ ಇದೆ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆದರೆ ಮಾತ್ರ ಜನವರಿ ಉತ್ತಮ ಸೌಕರ್ಯಗಳು ಸಿಗಲು ಸಾಧ್ಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳಾದ, ಬಸವರಾಜ ಸಾಜನೆ, ಪ್ರತಾಪ ಪಾಟೀಲ, ಮಹೇಶ ಕಾಂಬಳೆ, ರುದ್ರಯ್ಯಾ ಹಿರೇಮಠ, ಅಮೂಲ ನಾವಿ, ಖಾನಪ್ಪಾ ಬಾಡಕರ, ರಫೀಕ ಪಠಾಣ, ಅಪ್ಪಾಸಾಹೇಬ ಹಿರೇಕುಡಿ, ನಕೂಲ ಕಂಬಾರ, ರಮೇಶ ಡಂಗೇರ ಮತ್ತು ಸತ್ಯಪ್ಪಾ ಕಾಂಬಳೆ ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!