ತುಮಕೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆರೋಪಿಗಳಾದ ಕಾರ್ತಿಕ್ ನಿಖಿಲ್ ಮತ್ತು ಕೇಶವ್ ಮೂರ್ತಿಗೆ ಸೆಪ್ಟೆಂಬರ್ 23ರಂದೇ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ ಇದೀಗ ಈ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಯಾಗುವ ಭಾಗ್ಯ ದೊರೆತಿದೆ.
ಈ ಪ್ರಕರಣದಲ್ಲಿ A15, A16, A17 ಆರೋಪಿಗಳಾಗಿದ್ದ ಕಾರ್ತಿಕ್,ನಿಖಿಲ್ ಹಾಗೂ ಕೇಶವ್ ಗೆ ಜಾಮೀನು ಸಿಕ್ಕರು ಶೂರಿಟಿ ಬಾಂಡ್ ಮತ್ತು ಕಟ್ಟಲು ಸಾಧ್ಯವಾಗದೆ ತುಮಕೂರು ಜೈಲಿನಲ್ಲೇ ಉಳಿದಿದ್ದರು.
ಈ ಆರೋಪಿಗಳ ಕುಟುಂಬಸ್ಥರಿಗೆ ಶೂರಿಟಿ ಹಣ ಕಟ್ಟಲು ಸಾಧ್ಯವಾಗದೆ, ಈ ಆರೋಪಿಗಳು ಜಾಮೀನು ಸಿಕ್ಕ ನಂತರವೂ ಎಂಟು ದಿನಗಳ ಕಾಲ ಜೈನಿನಲ್ಲೇ ಉಳಿಯಬೇಕಾಯಿತು.
ಆದರೆ ಇದೀಗ ಎಲ್ಲಾ ಶರತ್ತುಗಳನ್ನು ಪೂರೈಸಿದ್ದು ತುಮಕೂರು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು ನಾಳೆ ಬೆಳಿಗ್ಗೆ ಕೇಶವಮೂರ್ತಿ, ನಿಖಿಲ್ ಹಾಗೂ ಕಾರ್ತಿಕ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ