ಇಶಾ ಫೌಂಡೇಶನ್ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂದ ಪಟ್ಟಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದ ನಂತರ 150 ಪೊಲೀಸ್ ಅಧಿಕಾರಿಗಳ ತಂಡವು ಇಂದು , ಕೊಯಮತ್ತೂರಿನ ತೊಂಡಮುತ್ತೂರ್‌ನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇಶಾ ಫೌಂಡೇಶನ್ ವಿರುದ್ಧದ ಆರೋಪಗಳ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರು ಸದ್ಗುರು ಜಗ್ಗಿ ವಾಸುದೇವ್ ಅವರ ವೈಯಕ್ತಿಕ ಜೀವನ ಮತ್ತು ಇತರರಿಗೆ ಭೋಧಿಸುವ ಜೀವನಶೈಲಿಯ ನಡುವಿನ ವ್ಯತ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಸದ್ಗುರು ತನ್ನ ಸ್ವಂತ ಮಗಳಿಗೆ ಮದುವೆ ಮಾಡಿ ಸಾಂಸಾರಿಕ ಜೀವನದ ದಾರಿ ತೋರಿಸಿ, ಇತ್ತ ಇಶಾ ಫೌಂಡೇಶನ್ ಅಲ್ಲಿ ಯುವತಿಯರೈಗೆ ಲೌಕಿಕ ಚಟುವಟಿಕೆಗಳನ್ನು ತ್ಯಜಿಸಿ, ತಲೆ ಬೋಳಿಸಿಕೊಂಡು, ತನ್ನ ಯೋಗ ಕೇಂದ್ರಗಳಲ್ಲಿ ಸಂನ್ಯಾಸಿಗಳಾಗಿ ಬದುಕಲು ಪ್ರೋತ್ಸಾಹಿಸುತ್ತಿರುವುದು ಏಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.