ಬೆಂಗಳೂರು: ಸೀರಿಯಲ್ ನಟಿಯ ಹಿಂದೆ ಬಿದ್ದು ಯುವಕನೋರ್ವ ತನ್ನ ಜೀವವನ್ನೇ ಕೊನೆಗೊಳಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಮದನ್ (25) ಮೃತಪಟ್ಟ ಯುವಕ. ಈತ ನಟಿ ವೀಣಾ ಮದುವೆ ನಿರಾಕರಿಸಿದ್ದಾಳೆಂದು ಮನನೊಂದು ನೇಣಿಗೆ ಶರಣಾಗಿದ್ದಾನೆ. ಮದನ್ ಮತ್ತು ವೀಣಾ ಲಿವ್ ಇನ್ ಸಂಬಂಧದಲ್ಲಿದ್ದರು.
ಅಂತೆಯೇ ನಿನ್ನೆ ರಾತ್ರಿ ಇಬ್ಬರೂ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದು, ಈ ವೇಳೆ ಮದನ್, ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಆಗ ವೀಣಾ ಮದುವೆಗೆ ಒಪ್ಪದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ವೀಣಾ ಮೇಲೆ ಹಲವು ಯುವಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಮೃತನ ಪೋಷಕರು ಯುವತಿ ಮೇಲೆ ಆರೋಪ ಮಾಡಿದ್ದಲ್ಲದೆ, ಮದುವೆಯಾಗುವುದಾಗಿ ಹಲವರಿಗೆ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಪೋಷಕರ ಆರೋಪ ಆಧರಿಸಿ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.