ಬೆಂಗಳೂರು : ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈಗ 2ನೇ ಸ್ಥಾನ ಪಡೆದಿದ್ದಾರೆ. ವಿಶ್ವದ 2ನೇ ಶ್ರೀಮಂತರಾಗಿ ಜುಕರ್ ಬರ್ಗ್ ಹೊರಹೊಮ್ಮಿದ್ದಾರೆ. ಇವರ ನಿವ್ವಳ ಸಂಪತ್ತು 206.2 ಶತಕೋಟಿ ಡಾಲರ್‌ಗೆ ತಲುಪಿದೆ. ಈ ಮೂಲಕ ಜೆಫ್ ಬಿಜೋಸ್‌ರನ್ನು ಹಿಂದಿಕ್ಕಿದ್ದಾರೆ.
ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಷೇರುಗಳು ಏರುತ್ತಲೇ ಇರುವುದರಿಂದ ಮಾರ್ಕ್ ಜುಕರ್ ಬರ್ಗ್ ಆಸ್ತಿಯಲ್ಲಿ ಗಣನೀಯ ಏರಿಕೆಕಂಡಿದೆ. ಮೆಟಾ ಕಂಪನಿಯ ಷೇರುಗಳು ಶೇಕಡ 23ರಷ್ಟು ಹೆಚ್ಚಾಗಿದೆ.
ಗುರುವಾರ ಕಂಪನಿಯ ಷೇರು ದರ ಸಾರ್ವಕಾಲಿಕ ಗರಿಷ್ಠ ಮೊತ್ತ 582.77 ಡಾಲರ್‌ಗೆ ತಲುಪಿದೆ. ಮೆಟಾ ಕಂಪನಿಯು ಈ ವರ್ಷ ಇಲ್ಲಿಯವರೆಗೆ 78 ಶತಕೋಟಿ ಡಾಲರ್‌ಗಳಷ್ಟು ಬೆಳವಣಿಗೆ ಕಂಡಿದೆ.
ಜುಕರ್ ಬರ್ಗ್ ಅವರ ಸಂಪತ್ತು ಅಮೆಜಾನ್.ಕಾಂನ ಬಿಜೋಸ್ ಸಂಪತ್ತಿಗಿಂತ 1.1 ಶತಕೋಟಿಯಷ್ಟು ಹೆಚ್ಚಿದೆ. ಟೆಸ್ಲಾದ ಮಾಲೀಕ ಎಲೋನ್ ಮಸ್ಕ್ ಆದಾಯಕ್ಕಿಂತ ಜುಕರ್ ಬರ್ಗ್ 50 ಶತಕೋಟಿ ಡಾಲರ್ ನಷ್ಟು ಹಿಂದಿದ್ದಾರೆ.