ಬೆಂಗಳೂರು: ಯುವತಿಯೊಬ್ಬಳು ಪಿಜಿಯ ಐದನೇ ಮಹಡಿಯಿಂದ ಜಿಗಿದು ಆಮಹತ್ಯೆಗೆ ಶರಣಾಗಿರುವ ಘಟನೆ ಬೆಣ್ಗಳೂರಿನ ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್ ನಲ್ಲಿ ನಡೆದಿದೆ.
ಗೌತಮಿ ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಆಂಧ್ರಪ್ರದೇಶದ ಕಡಪಾ ಮೂಲದ ಗೌತಮಿ ಬೆಂಗಳೂರಿನ ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್ ನಲ್ಲಿ ಪಿಜಿಯಲ್ಲಿ ವಾಸವಾಗಿದ್ದಳು.
ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಯುವತಿ ಡೆತ್ ನೋಟ್ ಬರೆದಿಟ್ಟು ಏಕಾಏಕಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.
ಡೆತ್ ನೋಟ್ ನಲ್ಲಿ ನನ್ನ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ಮಾಡಬೇಡಿ. ನನ್ನ ಪೋಷಕರಿಗೆ ನನ್ನ ಮೃತದೇಹ ಹಸ್ತಾಂತರಿಸಿ ಎಂದು ಬರೆದಿಟ್ಟಿದ್ದಾಳೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.