Ad imageAd image

ಸೋನಿಯಾ ಗಾಂಧಿ ಆತ್ಮಚರಿತ್ರೆಯ ಪ್ರಕಟಣೆ : ಹಾರ್ಪರ್‌ಕಾಲಿನ್ಸ್‌ನೊಂದಿಗೆ ಸಹಿ 

Bharath Vaibhav
ಸೋನಿಯಾ ಗಾಂಧಿ ಆತ್ಮಚರಿತ್ರೆಯ ಪ್ರಕಟಣೆ : ಹಾರ್ಪರ್‌ಕಾಲಿನ್ಸ್‌ನೊಂದಿಗೆ ಸಹಿ 
WhatsApp Group Join Now
Telegram Group Join Now

ನವದೆಹಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆತ್ಮಚರಿತ್ರೆಯ ಪ್ರಕಟಣೆಗಾಗಿ ಹಾರ್ಪರ್‌ಕಾಲಿನ್ಸ್‌ನೊಂದಿಗೆ ಮುಂಬರುವ ಸಹಿ ಹಾಕಿದ್ದಾರೆ.

ಆತ್ಮಚರಿತ್ರೆಯ ಪುಸ್ತಕವನ್ನು ಈವೆರಗೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಇದರ ಕೆಲಸ ಹಲವಾರು ವರ್ಷಗಳಿಂದ ನಡೆಯುತ್ತಿದೆ.

ಹಾರ್ಪರ್‌ಕಾಲಿನ್ಸ್ ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಂತ ಪದ್ಮನಾಭನ್ ಅವರು ಸೋನಿಯಾ ಗಾಂಧಿ ಅವರು ಸಹಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೆಂಗ್ವಿನ್ ರಾಂಡಮ್ ಹೌಸ್ ಈ ಆತ್ಮಚರಿತ್ರೆಯ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಬಹುದು ಎಂದು ಮಾಹಿತಿಯನ್ನು ನೀಡಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಲು ನಿರಾಕರಿಸಿದೆ. ಇತರ ವಿವರಗಳನ್ನು ಅಧಿಕೃತ ಪ್ರಕಟಣೆಯೊಂದಿಗೆ ತಿಳಿಸುವುದಾಗಿ ಮಾಹಿತಿ ನೀಡಿದೆ.

ಈ ಪುಸ್ತಕವು ನೆಹರು-ಗಾಂಧಿ ಕುಟುಂಬದ ಸದಸ್ಯರ ಮೊದಲ ಸಮಗ್ರ ಆತ್ಮಚರಿತ್ರೆಯಾಗಿದೆ. ಈ ಹಿಂದೆ ಇಂದಿರಾ ಹಾಗೂ ರಾಜೀವ್‌ ಗಾಂಧಿ ಅವರ ಅಕಾಲಿಕ ಮರಣದಿಂದಾಗಿ ಸಂಪೂರ್ಣವಾಗಿ ಜೀವನ ಚರಿತ್ರೆಯನ್ನು ಬರೆಯಲು ಸಾಧ್ಯವಾಗಲಿಲ್ಲ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!