ನವದೆಹಲಿ : ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಬದಲಾಯಿಸಲು ಮಹಾರಾಷ್ಟ್ರ ಸರ್ಕಾರದ ಸಂಪುಟದ ನಿರ್ಣಯಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಸ್ವಾಗತಿಸಿದ್ದು, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.
ಇದೇ ಮಾರ್ಚ್ 2024 ರಲ್ಲಿ, ಮಹಾರಾಷ್ಟ್ರ ಕ್ಯಾಬಿನೆಟ್ ಮರಾಠ-ಮಾಳವ ಸಾಮ್ರಾಜ್ಯದ 18 ನೇ ಶತಮಾನದ ರಾಣಿ ಪುಣ್ಯಶ್ಲೋಕ್ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಜಿಲ್ಲೆಯ ಮರುನಾಮಕರಣವನ್ನು ಪ್ರಸ್ತಾಪಿಸಿತ್ತು.
ಇದಕ್ಕೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದ್ದು,ಇನ್ಮುಂದೆ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಮನುನಾಮಕರಣ ಮಾಡಲಾಗಿದೆ.