ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕದಿ ಮೇಲೆ ಹಲ್ಲೆ ನಡೆದಿದೆ. ನಾಲ್ವರು ಸಹ ವಿಚಾರಣಾಧೀನ ಕೈದಿಗಳು ಓರ್ವ ವಿಚಾರಣಾಧೀನ ಕೈದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಜೈಲು ಹೊರಗಿನ ದ್ವೇಷ ಇದೀಗ ಜೈಲಿನಲ್ಲಿಯೂ ಮುಂದುವರೆದಿದೆ. ಹಿತೇಶ್ ಚೌವ್ಹಾಣ್ ಮಾರಣಾಂತಿಕ ಹಲ್ಲೆಗೊಳಗಾದ ವಿಚರಣಾಧೀನ ಕೈದಿ.ಬಸವರಾಜ್ ದಡ್ಡಿ, ಬಸು ನಾಯ್ಕ್, ಸವಿನಾ ದಡ್ಡಿ, ವಾಘಮೋರೆ ಹಲ್ಲೆ ನಡೆಸಿದ ಕೈದಿಗಳು.
ಹಿತೇಶ್ ಆರೋಪಿಗಳ ಸಬಂಧಿ ಲಕ್ಷ್ಮಣ್ ಮೇಲೆ ಹಲ್ಲೆನಡೆಸಿ ಜೈಲು ಸೇರಿದ್ದ. ಹಿಂಡಲಗಾ ಜೈಲಿಗೆ ಬರುತ್ತಿದ್ದಂತೆ ಹಿತೇಶ್ ಮೇಲೆ ನಾಲ್ವರು ಕೈದಿಗಳು ಮಾರಣಂತಿಕ ಹಲ್ಲೆ ನಡೆಸಿದ್ದಾರೆ. ಹಿತೇಶ್ ನ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.