Ad imageAd image

ಧಾರವಾಡ :ಇನ್ಸಪೆಕ್ಟರ್ ಕಾಡದೇವರಮಠ ತಂಡದಿಂದ LED ಮೋಸ ಮಾಡಿದ ಚಿಕ್ಕಮಠ ದಂಪತಿಗಳನ್ನ ಬಂಧಿಸಲಾಗಿದೆ.

Bharath Vaibhav
ಧಾರವಾಡ :ಇನ್ಸಪೆಕ್ಟರ್ ಕಾಡದೇವರಮಠ ತಂಡದಿಂದ LED ಮೋಸ ಮಾಡಿದ ಚಿಕ್ಕಮಠ ದಂಪತಿಗಳನ್ನ ಬಂಧಿಸಲಾಗಿದೆ.
WhatsApp Group Join Now
Telegram Group Join Now

 

ಧಾರವಾಡ: ಎಲ್ಇಡಿ ಬಲ್ಬ್ ಸ್ಕೀಮ್ ಹೆಸರಿನಲ್ಲಿ ಹಲವರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಎಸ್ಕೇಪ್ ಆಗಿದ್ದ ದಂಪತಿಯನ್ನ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ರಿಷಬ್ ಸ್ಮಾಲ್ ಎಂಟರ್ಪ್ರೈಸ್ ಮಾಲೀಕರಾದ ರಾಜಶೇಖರ ಚಿಕ್ಕಮಠ ಹಾಗೂ ಸರೋಜಾ ಚಿಕ್ಕಮಠ ಎಲ್‌ಇಡಿ ಬಲ್ಬ್ ನೆಪದಲ್ಲಿ ಬರೋಬ್ಬರಿ 49ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿ ಎಸ್ಕೇಪ್ ಆಗಿದ್ದರು.

ಈ ಬಗ್ಗೆ ದೂರು ದಾಖಲಾದ ತಕ್ಷಣ ಎಸಿಪಿ ಸಿದ್ದನಗೌಡ ಅವರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.

ಎರಡು ದಿನಗಳ ಕಾಲ ಆಟ ಆಡಿಸಿದ್ದ ಆರೋಪಿ ರಾಜಶೇಖರ ಚಿಕ್ಕಮಠ ಹಾಗೂ ಸರೋಜಾ ಚಿಕ್ಕಮಠ ಕೊನೆಗೂ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ದಂಪತಿಗಳು ಧಾರವಾಡದ ಮದಿಹಾಳ ಲಾಸ್ಟ್ ಬಸ್ ಸ್ಟಾಪ್ ಬಳಿಯಲ್ಲಿ ರಿಷಬ್ ಸ್ಮಾಲ್ ಎಂಟರ್ಪ್ರೈಸ್ ತೆರೆದು, ಎಲ್ಇಡಿ ಬಲ್ಬ್ ತಯಾರಿಸುವ ಸ್ಕೀಮ್ ಬ್ಯುಸಿನೆಸ್ ನಡೆಸುತ್ತಿದ್ದರು.
ಆಸಕ್ತರು 11 ಸಾವಿರ ಹಣವನ್ನು ಮೊದಲು ಡೆಪಾಸಿಟ್ ಮಾಡಿದರೆ 50 ಬಲ್ಬ್ ತಯಾರಿಸುವ ಕಚ್ಚಾ ವಸ್ತುಗಳ ಕಿಟ್ ಕೊಟ್ಟು, ತಯಾರಿಸಿ ಮರಳಿ ನೀಡಿದ ಬಲ್ಬ್‌ಗಳಿಗೆ 3500 ರೂಪಾಯಿ ಸಂಬಳ ಕೊಡುತ್ತಿದ್ದರು, ಇದೇ ರೀತಿ ನಲವತ್ತು ಜನರ ಹತ್ತಿರ ಲಕ್ಷಾಂತರ ರೂ. ಪಡೆದು ಮೋಸ ಮಾಡಿದ್ದಾರೆ.

ಮೋಸ ಮಾಡಿದ್ದ ರಿಷಬ್ ಸ್ಮಾಲ್ ಎಂಟರ್ಪ್ರೈಸ್ ಮಾಲೀಕರ ವಿರುದ್ಧ ಬಸನಗೌಡ ಅವರ ದೂರ ದಾಖಲಾಗುತ್ತಿದ್ದಂತೆಯೇ ಅದೆಷ್ಟೋ ಜನರು ಸಹ ಅಲರ್ಟ್ ಆಗಿದ್ದಾರೆ. ಅಷ್ಟೇ ಅಲ್ಲದೇ ಜನರಿಗೆ ಕಳಪೆ ಗುಣಮಟ್ಟದ ಬಲ್ಬ್’ಗಳನ್ನು ರಾಜಶೇಖರ ಹಾಗೂ ಸರೋಜಾ ಮಾರಾಟ ಮಾಡುವ ಪ್ಲಾನ್ ರೂಪಿಸಿರುವುದು ಬೆಳಕಿಗೆ ಬಂದಿದೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಪಿಐ ನಾಗೇಶ ಕಾಡದೇವರಮಠ, ಪಿಎಸ್ಐ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!