Ad imageAd image

ಕೆಎಂಸಿಆರ್‌‌ಐನಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ

Bharath Vaibhav
ಕೆಎಂಸಿಆರ್‌‌ಐನಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ
WhatsApp Group Join Now
Telegram Group Join Now

 

ಹುಬ್ಬಳ್ಳಿ : ಕೆಎಂಸಿಆರ್‌‌ಐನ ಪ್ರಸತಿ ವಿಭಾಗದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹುಬ್ಬಳ್ಳಿ ಗ್ರಾಮೀಣ ವತಿಯಿಂದ ಭೇಟಿ ಬಚಾವೋ ಭೇಟಿ ಪಡಾವೋ (ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆತ್ತಿಕಾ ಎಂ. ಸಿದ್ದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು. ಬಾಲ್ಯ ವಿವಾಹ, ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಇನ್ನಿತರ ಮಾಹಿತಿಯನ್ನು ಇಲಾಖೆಯ ಮೇಲ್ವಿ ಚಾರಕರು ನೀಡಿದರು. ಇಂದು ಜನಿಸಿದ ಹೆಣ್ಣು ಮಗುವಿನ ತಾಯಿಗೆ ಸಿಹಿ ತಿನಿಸಿ, ಭೇಟಿ ಬಚಾವೋ ಭೇಟಿ ಪಡಾವೋ ಕರಪತ್ರವನ್ನು ನೀಡಿ, ಗುಲಾಬಿ ಹೂವಿನ ಸಸಿಯನ್ನು ವಿತರಿಸಲಾಯಿತು. ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಎಂಸಿಆರ್‌‌ಐನ ಆರ್.ಎಂ.ಓ ಡಾ. ಸಿದ್ದೇಶ್ವರ್ ಕಡಕೋಳ, ಸ್ತ್ರೀ ವಿಭಾಗದ ಡಾ. ಹೇಮಲತಾ, ಅಮಿತಾ ಕಾಮತ್, ಹಿರಿಯ ಮೇಲ್ವಿಚಾರಕರು, ಮೇಲ್ವಿಚಾರಕರು, ಕೆಎಂಸಿಆರ್‌‌ಐನ ವೈದ್ಯಾಧಿಕಾರಿಗಳು, ಸಿಬ್ಬಂದಿ, ಪೋಷಕರು, ಇತರರು ಉಪಸ್ಥಿತರಿದ್ದರು.

ವರದಿ :  ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!