ಬೆಂಗಳೂರು: ನಗರದ ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರು ವಾರ್ಷಿಕವಾಗಿ 20,000 ಕೋಟಿ ನಷ್ಟು ಉತ್ಪಾದಕತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ನಷ್ಟ ಹಲವಾರು ವಿಚಾರಗಳನ್ನು ಒಳಗೊಂಡಿದ್ದು, ಸಮಯದ ಮೌಲ್ಯ, ದಟ್ಟಣೆಯಿಂದ ವ್ಯರ್ಥವಾದ ಇಂಧನ ಮತ್ತು ದೈನಂದಿನ ಕಚೇರಿಗೆ ಹೋಗುವವರ ಕಡಿಮೆ ಉತ್ಪಾದಕತೆಯನ್ನು ಒಳಗೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸಂಚಾರ ಗುಣಮಟ್ಟ ಸೂಚ್ಯಂಕದ (TQI) ವರದಿಯಲ್ಲಿ, ಬೆಂಗಳೂರು ಮುಂಬೈ ನಗರವನ್ನು ಹಿಂದಿಕ್ಕಿ ಭಾರತದ ಅತ್ಯಂತ ವಾಹನ ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ.