ಅಥಣಿ:- ಜಿಲ್ಲಾ ಪಂಚಾಯತ್ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಶಿಶು ಅಭಿವೃದ್ಧಿ ಯೋಜನೆ ಅಥಣಿ ಭೇಟಿ ಬಚಾವೋ ಬೇಟಿ ಪಡಾವ ಯೋಜನೆಯಡಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ,ದೇಸಾಯರಟ್ಟಿ ಗ್ರಾಮದಲ್ಲಿ ಐಗಳಿ ವಲಯ,ಪ್ರಾದೇಶಿಕವಾಗಿ ಹೆಣ್ಣು ಮಕ್ಕಳಿಗೆ ಇರುವ ಹಬ್ಬಗಳಲ್ಲಿ ವಿವಿಧ ವೇಷ ಭೂಷಣ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮತಿ ಆರ್.ಎಲ್ ಕಮತೆ ಹಿರಿಯ ಮೇಲ್ವಿಚಾರಕಿ ಅವರು ಮಾತನಾಡಿದರು.ಸಂಕ್ರಮಣ. ಯುಗಾದಿ ಬಸವ ಜಯಂತಿ ಅಂಬೇಡ್ಕರ್ ಜಯಂತಿ ಮಹಾವೀರ ಜಯಂತಿ ಶಿವಾಜಿ ಜಯಂತಿ ಸ್ವಾತಂತ್ರ್ಯ ದಿನಾಚರಣೆ ರಕ್ಷಾ ಬಂಧನ ರಮಜಾನ ದಸರಾ ದೀಪಾವಳಿ ಹಬ್ಬಗಳ ಬಗ್ಗೆ ವಿವರಿಸಿದ್ದರು
ಈ ಸಂದರ್ಭದಲ್ಲಿ ಎಸ್ ಬಿ ಮಗದುಮ ವಲಯ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಶೋಭಾ ಕಾಂಬಳೆ ಬಾಗವಾ ಬಡಿಗೇರ ಮಾಹಾದೇವಿ ಸವದಿ ಇಂದಿರಾ ಸಾವಂತ ಲಲಿತಾ ಚವಾಣ ಮನಿಷಾ ಕಾಮಕರ ಸೊನಾಲಿ ಶಿಂಧೆ ಲಷಬಾಯಿ ಪವಾರ ಗಿತಾ ಅವಟಿ ಶೋಭಾ ಸೋರೇವಶಿ ವನಿತಾ ಸಾವಂತ ಮತ್ತು ಶಾಲೆ ಮಕ್ಕಳು ಉಪಸ್ಥಿತರಿದ್ದರು
ವರದಿ:- ಸುಕುಮಾರ ಮಾದರ