ಬೆಳಗಾವಿ: ನಮ್ಮ ಅಸ್ತಿತ್ವ ಇಲ್ಲದ ರಾಜ್ಯದಲ್ಲಿ ನಮಗೆ ಈ ಸಲ ಹೆಚ್ಚಿನ ಸ್ಥಾನಗಳು ಬಂದಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ.
ನಮ್ಮ ಬಗ್ಗೆ ದೊಡ್ಡ ಪ್ರಮಾಣದ ಅಪಪ್ರಚಾರ ಇರುವ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಬೆಂಬಲ ಸಿಕ್ಕಿದೆ. ಬರುವ ದಿನಗಳಲ್ಲಿ ಪಕ್ಷವನ್ನು ಜಮ್ಮು-ಕಾಶ್ಮೀರದಲ್ಲಿ ಗಟ್ಟಿ ಮಾಡುತ್ತೇವೆ. ವಿರೋಧ ಪಕ್ಷವಾಗಿ ಆ ರಾಜ್ಯಕ್ಕೆ ಹೇಗೆ ನ್ಯಾಯ ಕೊಡಿಸಬೇಕೋ? ಕೊಡಿಸುತ್ತೇವೆ ಎಂದರು.
ಹರಿಯಾಣದಲ್ಲಿ ಎರಡು ಸಲ ಅಧಿಕಾರ ನಡೆಸಿದ ಕಾರಣಕ್ಕೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಹರಿಯಾಣ ಜನ ನಮ್ಮನ್ನು ಒಪ್ಪಿಕೊಂಡು, ಬಹುಮತ ಕೊಟ್ಟಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಸರ್ವೆ ವರದಿಗಳು ಹೇಳಿದ್ದವು ಎಂದು ಹೇಳಿದರು.