Ad imageAd image

ತಸಿಲ್ದಾರ್ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ನಡೆದ

Bharath Vaibhav
ತಸಿಲ್ದಾರ್ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ನಡೆದ
WhatsApp Group Join Now
Telegram Group Join Now

 ಮಾನ್ವಿ:-  ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ರಾಜು ಪೀರಂಗಿ ಮಾತನಾಡಲು ಪ್ರಾರಂಭಿಸಿದ್ದಂತೆ ಸಮುದಾಯದ ಮುಖಂಡರು ರಾಯಚೂರು ಲೋಕಸಭಾ ಕ್ಷೇತ್ರ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿದ್ದು,ನಮ್ಮ ಸಮುದಾಯದವರೇ ಆದ ಶಾಸಕರು ಸಂಸದರು ಆಯ್ಕೆಯಾಗಿದ್ದರು ಕೂಡ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ
ಸುಮಾರು 20 ವರ್ಷದಿಂದ ಬೇಡಿಕೆ ಇರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜರಾದರೂ

ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಜನಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಲಾಯಿತು.70 ರಿಂದ 80,000 ಜನಸಂಖ್ಯೆ ಇರುವ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಭವನ ಡಾ. ಅಂಬೇಡ್ಕರ್ ಭವನ ಡಾ. ಬಾಬುಜಗಜೀವನ್ ರಾಮ್ ಭವನ ಸೇರಿದಂತೆ ಒಂದು ಭವನ ಕೂಡ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಯ್ಯಪ್ಪ ಮ್ಯಾಕಲ್ ಮಾತನಾಡಿ ಎಸ್ ಸಿ ಎಸ್ ಟಿ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೂರ್ವಭಾವಿ ಸಭೆಗೆ ಸಮಾಜದ ಮುಖಂಡರು ರಾಜ ಶಾಮ ಸುಂದರ ನಾಯಕ್ ಅಯ್ಯಪ್ಪ ಮ್ಯಾಕಲ್ ಹನುಮೇಶ ಸಾದಾಪುರ್ ನರಸಿಂಹ ನಾಯಕ್ ಕರಡಿಗುಡ್ಡ ಶಿವರಾಜ್ ನಾಯಕ್ ರಾಮಣ್ಣ ನಾಯಕ್ ಶರಣಬಸವ ನಾಯಕ್ ಜಾನೇಕಲ್ ಇನ್ನು ಹಲವಾರು ಸಮಾಜದ ಮುಖಂಡರು ಕುಂದು ಕೊರತೆಗಳ ಬಗ್ಗೆ ಮಾತನಾಡಿದರು

ತಹಶೀಲ್ದಾರ್ ರಾಜು ಪೀರಂಗಿ ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜದ ಕುಂದು ಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಅಕ್ಟೋಬರ್ 17ರಂದು ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸಹಕಾರ ನೀಡುವಂತೆ ಕೋರಿದರು ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಗಂಗಾಧರ್ ಪರಿಶಿಷ್ಟ ಪಂಗಡ ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ್,ತಾಲೂಕ್,ಕಾರ್ಯನಿರ್ವಹಣಾಧಿಕಾರಿ
ಖಾಲಿದ ಅಹಮದ್ D.ಶರಣಪ್ಪ ಸೇರಿದಂತೆ ಇನ್ನಿತರು ಎಲ್ಲರೂ ಭಾಗಿಯಾಗಿದ್ದರು.

ವರದಿ :-ಶಿವ ತೇಜ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!