ಹುಕ್ಕೇರಿ :-ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ. ಇಂದು ಹುಕ್ಕೇರಿ ನಗರಗಳಲ್ಲಿರುವ ಅಂಗಡಿಗಳ ಶೇಕಡ 60% ಪರ್ಸೆಂಟ್ ಕನ್ನಡ ನಾಮಫಲಕಗಳಿಲ್ಲದ ನಾಮಫಲಕಗಳನ್ನು ತೆರವುಗೊಳಿಸಲಾಯಿತು.
ಪುರಸಭೆಯ ಅಧಿಕಾರಿಗಳು ಕಾರ್ಮಿಕರು ಹಾಗೂ ಹುಕ್ಕೇರಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಸರ್ವ ಸದಸ್ಯರೊಂದಿಗೆ
ಹುಕ್ಕೇರಿ ನಗರದಲ್ಲಿರುವ ಅಂಗಡಿಗಳ ಬೋರ್ಡ್ ಗಳನ್ನ ತೆರವುಗೊಳಿಸಿದರು
ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಹಾಕಲು ತಿಳಿ ಹೇಳಿದರು. ಕನ್ನಡ ಭಾಷೆ ನಮ್ಮ ಹೆಮ್ಮೆ ಕನ್ನಡ ಬಳಸಿ ಕನ್ನಡ ಉಳಿಸಿ ಎಂದು ಸಂದೇಶವನ್ನು ರವಾನಿಸಿದರು
ಕೆಲವು ನಾಮಫಲಕಗಳನ್ನು ಉಳಿಸಿದರು ಅವರಿಗೆ ಎರಡು ದಿನದಲ್ಲಿ ಕಡ್ಡಾಯವಾಗಿ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟಿತರು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.ನಮ್ಮ ಕನ್ನಡ ನಾಡ ನುಡಿಗೆ ನಾವು ಬೆಲೆ ಕೊಡಲೇಬೇಕು ಕನ್ನಡ ಬಳಸಿ ಕನ್ನಡ ಉಳಿಸಿ, ಇದು ನಮ್ಮ ಹಕ್ಕು ಎಂದು ಹೇಳಿದರು.
ಪುರಸಭೆಯ ಮ್ಯಾನೇಜರ್ ಮಲ್ಲಿಕಾರ್ಜುನ್, ಕಾರ್ಮಿಕರ ಮುಂದಾಳತ್ವದಲ್ಲಿ ಹಾಗೂ ಹುಕ್ಕೇರಿಯ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಈ ಕಾರ್ಯವನ್ನು ಯಶಸ್ವಿಗೊಳಿಸಲಾಯಿತು
ಪ್ರಧಾನ ಘಟಕದ ಅಧ್ಯಕ್ಷರು-ಪ್ರಮೋದ್ ಕೂಗೆ,ಘಟಕದ ಉಪಾಧ್ಯಕ್ಷರು
ಶಾಂತಿನಾಥ ಮಗದುಮ್,ಯುವ ಘಟಕದ ಅಧ್ಯಕ್ಷರು
ಪ್ರದೀಪ್ ರಿಜಿಕ್ನವರ್,ವಿದ್ಯಾರ್ಥಿ ಘಟಕದ ಅಧ್ಯಕ್ಷರು
ರೋಬಿನ್ಸ್ ಕೌಜಲಗಿ,ಸುನಿಲ್ ಕರೋಶಿ, ನೀಲ್ಸನ್ ಕೌಜಲಗಿ,
ಸೌರಭ್ ತಳವಾರ್ ರೆಹಾನ್ ಚಟ್ಟರ್ಗಿಅಬಿಜಿತ್ ಮುಗಳಿ.ಮಲಿಕಖಾನಾಪುರಿ ಹಾಗೂ ಮುಂತಾದ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು
ವರದಿ:-ಶಾಂತಿನಾಥ್ ಜಿ ಮಗದುಮ್