ಬೆಳಗಾವಿ: ಗೋವಾ ಮೂಲದ ಯುವತಿಯೊಬ್ಬಳು ಕನ್ನಡಿಗರ ಜೊತೆ ಕಿರಿಕ್ ತೆಗೆದ ಘಟನೆ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಯುವತಿ ಎಟಿಎಂಗೆ ತೆರಳಿ ಗ್ರಾಹಕರ ಜೊತೆ ವಾಗ್ವಾದ ನಡೆಸಿದ್ದಾಳೆ. ಎಟಿಎಂ ನಿರ್ವಹಣೆ ಸಿಬ್ಬಂದಿಯ ಕಾರ್ಯಕ್ಕೂ ಅಡ್ಡಿಪಡಿಸಿದ್ದಾಳೆ.ತಾನೂ ಸೇವೆ ಪಡೆಯದೇ ಇತರರಿಗೂ ಸೇವೆ ಪಡೆಯಲು ಅಡಚಣೆ ನೀಡಿದ್ದಾಳೆ.
ಈ ವೇಳೆ ಸ್ಥಳೀಯರು ಕನ್ನಡದಲ್ಲಿ ಮಾತನಾಡಿದಾಗ ಆಕೆ ಕಿಡಿಕಾರಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಆಕೆ ಕನ್ನಡಿಗರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಅವಮಾನ ಮಾಡಿದ್ದಾಳೆ. ಕನ್ನಡದಲ್ಲಿ ಮಾತನಾಡಬೇಡ, ಹಿಂದಿಯಲ್ಲಿ ಮಾತಾಡು ಎಂದಿದ್ದಾಳೆ. ಈ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.