ಮುಂಬೈ : ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಟಾಟಾ ನಿಧನಕ್ಕೆ ಅವರ ಮಾಜಿ ಪ್ರೇಯಸಿ ಕಂಬನಿ ಮಿಡಿದಿದ್ದಾರೆ.
ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ರತನ್ ಟಾಟಾ ಅವರೊಂದಿಗೆ ಡೇಟಿಂಗ್ ಮಾಡಿದ್ದನ್ನು ಒಮ್ಮೆ ಒಪ್ಪಿಕೊಂಡಿದ್ದ ಸಿಮಿ ಗರೇವಾಲ್, ಅಪ್ರತಿಮ ಕೈಗಾರಿಕೋದ್ಯಮಿ ನಿಧನದ ನಂತರ ಹೃತ್ಪೂರ್ವಕ ಶ್ರದ್ಧಾಂಜಲಿಯನ್ನು ಹಂಚಿಕೊಂಡಿದ್ದಾರೆ.
ತನ್ನ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಟಾಟಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ., “. ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ , ನಿಮ್ಮ ನಷ್ಟವನ್ನು ಭರಿಸುವುದು ತುಂಬಾ ಕಷ್ಟ.. ತುಂಬಾ ಕಷ್ಟ.. ವಿದಾಯ ಗೆಳೆಯ.. #RatanTata. ಎಂದು ಬರೆದುಕೊಂಡಿದ್ದಾರೆ.