ಕೋಲಾರ : ಮಹಿಳೆಯನ್ನು ಹತ್ಯೆಗೈದು ಶವದ ಜೊತೆ ಸೆಕ್ಸ್ ಮಾಡಿದ ಸೈಕೋ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಮುಳಬಾಗಿಲು ಪೊಲೀಸರು ಖತರ್ನಾಕ್ ಆರೋಪಿಯನ್ನು ಬಂಧಿಸಿದ್ದಾರೆ. ಆಟೋ ಚಾಲಕನಾಗಿದ್ದ ಸೈಕೋ ಕಿಲ್ಲರ್ ಸೈಯ್ಯದ್ ಸುಹೇಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸೆ.24 ರಂದು ಈತ ಕೋಲಾರದ ಮುಳಬಾಗಿಲು ಪಟ್ಟಣದ ಪಳ್ಳಿಗರಪಾಳ್ಯದ ಸುಶೀಲಮ್ಮ ಎಂಬುವವರನ್ನು ಕೊಲೆ ಮಾಡಿ ಬಳಿಕ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದನು. ಸೈಕೋ ಅಟ್ಟಹಾಸಕ್ಕೆ ಜನರು ಬೆಚ್ಚಿಬಿದ್ದಿದ್ದರು.
ಪ್ರಕರಣ ಸಂಬಂಧ ಮುಳಬಾಗಿಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.