ನವದೆಹಲಿ: ಪಶ್ಚಿಮ ಬಂಗಾಳದ ವೈದ್ಯರಿಗೆ ಬೆಂಬಲವಾಗಿ ಸೋಮವಾರದಿಂದ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಚುನಾಯಿತ ಸೇವೆಗಳನ್ನ ಸ್ಥಗಿತಗೊಳಿಸಲು ವೈದ್ಯರ ಸಂಘ FAIMA ಕರೆ ನೀಡಿದೆ. ತುರ್ತಿ ಸೇವೆ ಹೊರತುಪಡಿಸಿ, ಓಪಿಡಿ ಸೇವೆ ಬಹುತೇಕ ಬಂದ್ ಆಗೋ ಸಾಧ್ಯತೆ ಇದೆ.
ಸರಕ್ಷಿತ ಕೆಲಸದ ಪರಿಸ್ಥಿತಿಗಳಿಗಾಗಿ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ನಮ್ಮ ಪಶ್ಚಿಮ ಬಂಗಾಳದ ಸಹೋದ್ಯೋಗಿಗಳಿಗೆ ಬೆಂಬಲವಾಗಿ ಮತ್ತು ಒಂದು ವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ನಮ್ಮ ಸಹೋದ್ಯೋಗಿಗಳ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ತೋರಿಸಿದ ಉದಾಸೀನತೆಯ ವಿರುದ್ಧ ಇಂದಿನಿಂದ ಪ್ರತಿಭಟನೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.
ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು, ಅಕ್ಟೋಬರ್ 14, 2024 ರಿಂದ ಚುನಾಯಿತ ಸೇವೆಗಳನ್ನು ಬಹಿಷ್ಕರಿಸಲು ದೇಶಾದ್ಯಂತದ ಎಲ್ಲಾ ವೈದ್ಯಕೀಯ ಸಂಘಗಳು ಮತ್ತು ನಿವಾಸಿ ವೈದ್ಯರಿಗೆ FAIMA INDIA ಕರೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮತ್ತು ದೇಶಾದ್ಯಂತದ ಎಲ್ಲಾ ಆರೋಗ್ಯ ವೃತ್ತಿಪರರಿಗೆ ಕ್ರಮ ಮತ್ತು ಸುರಕ್ಷತೆಯನ್ನು ನಾವು ಒತ್ತಾಯಿಸುತ್ತೇವೆ ಎಂದು ವೈದ್ಯಕೀಯ ಸಂಘಟನೆಗಳು ನಿರ್ಧರಿಸಿದ್ದಾವೆ.
ಇಂದು ಯಾವ ಸೇವೆ ಲಭ್ಯ ಮತ್ತು ಯಾವುದು ಅಲಭ್ಯ?
ಇಂದು ದೇಶಾದ್ಯಂತ ವೈದ್ಯಕೀಯ ಸಂಘಟನೆಗಳಿಂದ ಪ್ರತಿಭಟನೆ ಕರೆ ನೀಡುವ ಕಾರಣ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಸೇವೆಯಲ್ಲಿ ವ್ಯತ್ಯಾಸ ಆಗುವಂತ ಸಾಧ್ಯತೆ ಇದೆ. ತುರ್ತು ಸೇವೆಯನ್ನು ಹೊರತಾಗಿ ಇನ್ನುಳಿದಂತ ಸೇವೆಗಳು ಅಲಭ್ಯವಾಗೋ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ.
ಅಪಘಾತದಂತ ತುರ್ತು ಸಂದರ್ಭದ ಸೇವೆಗಳು, ಅನಾರೋಗ್ಯದಂತ ಎಮರ್ಜೆನ್ಸಿ ಸೇವೆಗಳು, ಆಪರೇಶನ್ ಸೇರಿದಂತೆ ಇತರೆ ಸೇವೆಗಳು ಆಸ್ಪತ್ರೆಗಳಲ್ಲಿ ದೊರೆಯಲಿವೆ. ಇದರ ಹೊರತಾಗಿ ಹೊರ ರೋಗಿಗಳ ಸೇವೆಗಳು ಬಂದ್ ಆಗಲಿವೆ. ಈ ಮೂಲಕ ನಾಳೆಯಿಂದ ವೈದ್ಯಕೀಯ ಸೇವೆಯಲ್ಲಿ ವ್ಯತ್ತಯ ಉಂಟಾಗಿ, ರೋಗಿಗಳು ಪರದಾಡುವಂತ ಸಾಧ್ಯತೆ ಇದೆ.