ಚಿಕ್ಕೋಡಿ : ಹವಾಮಾನ ವೈಪರಿತ್ಯದ ಪರಿಣಾಮ ಅತ್ಯುತ್ತಮ ಫಸಲು ನೀಡಬೇಕಿದ್ದ ದ್ರಾಕ್ಷಿ ಬೆಳೆ ಕೈ ಕೊಟ್ಟಿದ್ದು ರೈತಾಕ್ ಕಂಗಾಲಾಗಿದ್ದಾನೆ. ಹೀಗಾಗಿ ಲಕ್ಷಾಂತರ ರೂಪಾಯಿ ಮೌಲ್ಯ ಖರ್ಚು ಮಾಡಿ ಬೆಳೆದ ದ್ರಾಕ್ಷಿ ಗಿಡಗಳನ್ನು ಸ್ವತಃ ರೈತನೇ ಕಡಿದುಹಾಕಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಶೀಮಸಾಬ್ ಮುಜಾವರ್ ಎಂಬ ರೈತ ದ್ರಾಕ್ಷಿ ಬೆಳೆದಿದ್ದರು. ಆದ್ರೆ 2 ವರ್ಷಗಳಿಂದ ಸರಿಯಾಗಿ ಮಳೆಯಾಗದ ಹಿನ್ನಲ್ಲೆ ಈ ರೈತನಿಗೆ ತೀವ್ರ ನಷ್ಟ ಉಂಟಾಗಿದೆ. ಬೆಳೆಯನ್ನು ಕಾಪಾಡಲು ಬೇಸಿಗೆ ಸಮಯದಲ್ಲಿ ಟ್ಯಾಂಕರ ಮೂಲಕ ನೀರು ಪೂರೈಸಿ ಸದ್ಯ ರೈತ ಸಾಲದ ಸುಳಿಯಲ್ಲಿ ಸಿಕುಕಿಕೊಂಡಿದ್ದಾರೆ.
ಎರಡು ವರ್ಷದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬಾರದ ಹಿನ್ನಲ್ಲೆ, ಜೊತೆಗೆ ಸರ್ಕಾರದಿಂದ ಬರುವ ಬೆಳೆ ವಿಮೆಯಲ್ಲಿ ಸಹ ತಾರತಮ್ಯ ಆಗಿದೆ ಎಂದು ಅಸಮಾಧಾನಗೊಂಡ ರೈತ, ಕೊಡಲಿಯಿಂದ ತಾನೇ ದ್ರಾಕ್ಷಿ ಗಿಡಗಳನ್ನು ಕಡಿದು ಬಿಸಾಕಿದ್ದಾನೆ.