ರಾಯಚೂರು:-ಲಾರಿ ಹಾಗು ಕಾರ್ ನಡುವೆ ಮುಖಾಮುಖಿ ಡಿಕ್ಕಿ,ಸಿರವಾರ ಠಾಣೆ ವ್ಯಾಪ್ತಿಯ ಕಲ್ಲೂರು ಬಳಿ ಘಟನೆ,ಅಪಘಾತದಲ್ಲಿ ಮಕ್ಬೂಲ್,ಯಾಸಿನ್,ಅರಫತ್ ಸಾವು .
ತಂಗಿ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ರಾಯಚೂರಿಗೆ ತೆರಳುವ ವೇಳೆ ಕಾರು ಹಾಗು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಸಂಭವಿಸಿದೆ.
ಮುಖಾಮುಖಿ ಡಿಕ್ಕಿಯ ರಭಸಕ್ಕೆ ಮಾನ್ವಿ ಪಟ್ಟಣದ ನಿವಾಸಿಗಳಾದ ಯಾಸಿನ್,ಅರಫತ್ ಹಾಗು ಮಕ್ಬೂಲ್ ಸಾವನ್ನಪ್ಪಿದವರು. ಇದಕ್ಕೆ ಕಾರಣ ಲೋಕೋಪಯೋಗಿ ಇಲಾಖೆ ಸರಿಯಾಗಿ ಗುಂಡಿ ಮುಚ್ಚದ ಕಾರಣ ಅಪಘಾತ ಸಂಭವಿಸಲು ಪ್ರಮುಖ ಕಾರಣವಾಗಿದೆ.
ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಕಾರ್ ಗೆ ಬಂದು ಗುದ್ದಿದ್ದರಿಂದ ಅಪಘಾತಕ್ಕೆ ಮೂವರ ಸಾವಿಗೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು,ಪತ್ನಿ ಹಾಗು ಮಕ್ಕಳ ರೋಧನೆ ಹೇಳತೀರದಾಗಿತ್ತು.ಘಟನೆ ಸುದ್ದಿ ತಿಳಿದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾನ್ವಿಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕಾನೂನು ಬದ್ಧವಾಗಿ ಮೃತಪಟ್ಟವರಿಗೆ ಪರಿಹಾರ ಸಿಗುವ ಕೆಲಸ ಮಾಡಿ ಎಂದು ಪೊಲೀಸ್ ಇಲಾಖೆ ಹಾಗು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಿರವಾರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಶಶಿಕಾಂತ್ ಹಾಗು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ :-ಶಿವ ತೇಜ