ಹುಬ್ಬಳ್ಳಿ:- ಸಾವಿನ ಹೆದ್ದಾರಿಗೆ ಮತ್ತೆರಡು ಬಲಿ.ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ,ಛಿದ್ರ ಛಿದ್ರವಾದ ಎರಡೂ ಮೃತ ದೇಹಗಳು. ಹೊರವಲಯದಲ್ಲಿರುವ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನದ ಬಳಿಯ ಬೈಪಾಸ್‌ನಲ್ಲಿ ನಡೆದ ಅವಘಡದಿಂದ ಇಬ್ಬರ ಸಾವಿಗೀಡಾಗಿದ್ದು ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿವೆ.
ಮೃತ ಇಬ್ಬರೂ ವ್ಯಕ್ತಿಗಳ ಗುರುತು ಪತ್ತೆಯಾಗದ ರೀತಿಯಲ್ಲಿ ಛಿದ್ರವಾಗಿ ಬಿದ್ದಿದ್ದು,ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರ ಬಗ್ಗೆ ಪೋಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭೇಟಿ,ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾವಿನ ರಸ್ತೆಗೆ ಇನ್ನೆಷ್ಟು ಬಲಿ ಬೇಕೆಂದು ಪ್ರಶ್ನೆ ಮಾಡುತ್ತಿರುವ ಹುಬ್ಬಳ್ಳಿ-ಧಾರವಾಡ ಜನ್ರು.ಪ್ರತಿದಿನವೂ ಕೈಯಲ್ಲಿ ಜೀವನ ಹಿಡಿದು ಸಂಚಾರ ಮಾಡುವಂತಾಗಿದೆ.1400 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಗಲಿಕರಣಕ್ಕೆ,ಚಾಲನೆ ಸಿಕ್ಕು ಮೂರು ವರ್ಷ ಕಳೆದ್ರೂ ಇನ್ನೂ ಸಿಕ್ಕಿಲ್ಲ ಜನರಿಗೆ ಉಪಯೋಗ.ಇದೇ ಕಾರಣಕ್ಕಾಗಿ ದಿನನಿತ್ಯ ಬಲಿ ಪಡೆದುಕೊಳ್ಳುತ್ತಿದೆ ರಾಷ್ಟ್ರೀಯ ಹೆದ್ದಾರಿ.
ವರದಿ:- ಸುಧೀರ್ ಕುಲಕರ್ಣಿ