ಮಾನ್ವಿ:- ಪಟ್ಟಣದ ಅಲ್-ಹಿರಾ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಶೇಕ್ ಮೊಹಮ್ಮದ್ ಯೂಸುಫ್ ಸುಪಿಯಾನ್ 14 ವರ್ಷದೊಳಗಿನವರ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ ಇತ್ತೀಚೆಗೆ ಲಿಂಗಸ್ಗೂರಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಡೆಸಿದ 2024-25 ನೇ ಸಾಲಿನ ವಿಭಾಗ ಮಟ್ಟದ ಆಟೋಟಗಳ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿದ್ಯಾರ್ಥಿ ನಾಳೆ ದಿನಾಂಕ 17 ಮತ್ತು 18ರಂದು ರಾಜ್ಯದ ಚಿಕ್ಕೋಡಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಕ್ರಿಕೆಟ್ ಆಟವನ್ನು ಆಡಲಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಅಧ್ಯಕ್ಷ ಸೈಯದ್ ಅಕ್ಬರ್ ಪಾಷ ಪ್ರಥಮದರ್ಜೆ ಗುತ್ತೇದಾರರು ಮತ್ತು ಶಾಲೆಯ ಕಾರ್ಯದರ್ಶಿ ಮೌಲಾನಾ ಶೇಕ್ ಫರೀದ್ ಉಮರಿ, ಮಗುವಿನ ತಂದೆ ಮಂಜೂರ್ ಇಲಾಹಿ ಸಂತಸ ವ್ಯಕ್ತಪಡಿಸಿದ್ದಾರೆ ಈ ಹುಡುಗ ತನ್ನ ಪ್ರತಿಭೆಯ ಮೂಲಕ ಇನ್ನೂ ಎತ್ತರಕ್ಕೆ ಬೆಳೆಯಲಿ ಮತ್ತು ದೇಶಕ್ಕಾಗಿ ಆಡುವ ಕ್ರಿಕೆಟಿಗನಾಗಲಿ ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ವರದಿ:- ಶಿವ ತೇಜ