ಇಳಕಲ್ :-2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಕೆಯ ಕುರಿತು ಅಕ್ಟೋಬರ್-03 ರಿಂದ ನವೆಂಬರ್-30ರವರೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ,ದಿನಾಂಕ:14-10-2024ರಂದು ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾ.ಪಂಯ ಹಿರೇಕೊಡಗಲಿ ಗ್ರಾಮದ ಗ್ರಾ.ಪಂಯ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ಸಹಾಯಕ ನಿರ್ದೇಶಕರಾದ ರವರು ಮಾತನಾಡಿ 2025-26ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಕೆಯ ಭಾಗವಾಗಿ ಪ್ರಸಕ್ತದಲ್ಲಿ ಜರುಗುತ್ತಿರುವ *ಉದ್ಯೋಗ ಖಾತರಿ ನಡೆಗೆ ಸಬಲತೆಯಡೆಗೆ ಉದ್ದೇಶ ಹಾಗು ಯೋಜನೆಯಡಿ ಅವಕಾಶ ಇರುವ ದನ,ಕುರಿ,ಹಂದಿ,ಕೋಳಿ ಶೇಡ್ ಹಾಗೂ ಬದುನಿರ್ಮಾಣ,ರೇಷ್ಮೆ ಕೃಷಿ, ತೋಟಗಾರಿಕೆಯ ಗುಲಾಬಿ,ಮಲ್ಲಿಗೆ ಹಾಗೂ ದಾಳಿಂಬೆ ಬೆಳೆಗಳ ಕಾಮಗಾರಿಗಳ ಕುರಿತು ವಿವರಿಸಿದರು.
ಗ್ರಾಮದಲ್ಲಿ ಮನೆ ಮನೆ ಭೇಟಿ ಮೂಲಕ ಯೋಜನೆಯ ಜಾಗೃತಿ ಮೂಡಿಸಿ ಯೋಜನೆಯಡಿ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಲಾಯಿತು.
* ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇರಿಸಿ ಪೆಟ್ಟಿಗೆಯಲ್ಲಿ ಕಾಮಗಾರಿ ಅವಶ್ಯಕತೆ ಇರುವ ಫಲಾನುಭವಿಗಳಿಂದ ವಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲಾಯಿತು.
* ನರೇಗಾ ಕಡತ ಹಾಗೂ 7ದಾಖಲಾತಿಗಳನ್ನು ಪರಿಶೀಲನೆ ಮಾಡಿ ನವೀಕರಿಸಲು ತಿಳಿಸಲಾಯಿತು.
* ಸ್ವ ಸಹಾಯ ಸಂಘದ ಸದಸ್ಯರಿಂದ form-6 ರಲ್ಲಿ ಕೆಲಸಕ್ಕಾಗಿ ಅರ್ಜಿ ಸ್ವೀಕರಿಸಲಾಯಿತು, ಸದರಿ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿ TC.TIEC, TAE BFT, GKM ಗ್ರಾಮ ಪಂಚಾಯತ ಸಿಬ್ಬಂದಿ, ಹಾಜರಿದ್ದರು ಸರ್.ತಾಲೂಕ ಐಇಸಿ ಸಂಯೋಜಕರು ಇಳಕಲ್
ವರದಿ:- ದಾವಲ್ ಶೇಡಂ