ಶಿವಮೊಗ್ಗ: ಮುಡಾ ಹಗರನದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯನವರನ್ನು ಚಾಮುಂಡಿ, ಸವದತ್ತಿ ಯಲ್ಲಮ್ಮ ರಕ್ಷಣೆ ಮಾಡಬೇಕಾ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಮುಸ್ಲಿಂರು, ಗೂಂಡಾಗಳ ಪರ ಇದ್ದರೆ ಚಾಮುಂಡಿ, ಯಲ್ಲಮ್ಮ ಹೇಗೆ ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ರೀತಿ ನೀವೂ ಸಂಹಾರವಾಗ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ದೇವಾಲಯಗಳಿಗೆ ಭೇಟಿ ನೀಡಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲು ಕುಂಕುಮ ಹಚ್ಚಲು ಹೋದರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು ಎಂದು ವ್ಯಂಗ್ಯವಾಡಿದರು.
ಜಾತಿಗಣತಿಯನ್ನು 9 ವರ್ಷಗಳ ಹಿಂದೆಯೇ ಮಂಡಿಸುತ್ತೇನೆ ಎಂದಿದ್ದ ಸಿದ್ದರಾಮಯ್ಯ ಇಷ್ಟುವರ್ಷವಾದರೂ ಮಂಡಿಸಿಲ್ಲ. ಈಗ ಅ.18ಕ್ಕೆ ಮಂಡಿಸುತ್ತೇನೆ ಎಂದವರು ಈಗ ಅ.25ಕ್ಕೆ ಮಂಡನೆ ಮಾಡ್ತೀನಿ ಎಂದಿದ್ದಾರೆ ಎಂದರು.