ಮುದಗಲ್ಲ:-ಐತಿಹಾಸಿಕ ಮುದಗಲ್ ಪಟ್ಟಣ ದಲ್ಲಿ ವಿಜಯ ದಶಮಿ ಹಬ್ಬದ ನಿಮಿತ್ಯ ಒಂಬತ್ತು ದಿವಸ ಶ್ರೀ ದೇವಿ ಪುರಾಣವನ್ನು ಶ್ರೀ ಶಾಂಭವಿ ಮಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಿತು.
ಒಂಬತ್ತು ದಿವಸ ಶ್ರೀದೇವಿ ಪುರಾಣವನ್ನು ಹೇಳಿರುವ ಶ್ರೀ ಸಿದ್ದಯ್ಯ ಸ್ವಾಮಿ ಸಾಲಿಮಠ ಹಾಗು ವೀರಣ್ಣ ಹಡಪದ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಖಾದ್ರಿ, ಸಾಬು ಹುಸೇನ್, ಜಮೀರ ಪಾಶಾ, ರಹೆಮಾನ ದೂಲಾ ಜಂಬಾಳಿ, ನಾಗರಾಜ ನಾಯಕ ಮಟ್ಟೂರ, ಬಸವರಾಜ ಚೆಟ್ಟರ, ಶರಣಪ್ಪ ಸಜ್ಜನ, ರಹೆಮಾನ ಬೇಗ, ರಾಮು ಉಪ್ಪಾರ, ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ