ವಿಜಯಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಂದಗಿಯಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಅಗ್ರಹಿಸಿ ವಿದ್ಯಾರ್ಥಿಗಳು ದಿಡೀರನೆ ವರ್ಗ ಕೋಣೆಯನ್ನು ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿ ಪ್ರಾಚಾರ್ಯರಾದ ಶಿವಲಿಂಗ ಹಳೆಮನೆ ಇವರಿಗೆ ಮನವಿ ಸಲ್ಲಿಸಿದರು
ವಿದ್ಯಾರ್ಥಿಗಳ ಮುಖಂಡರಾದ ಹರ್ಷವರ್ಧನ್ ಪೂಜಾರಿ ಮಾತನಾಡಿ ಸರ್ಕಾರಿ ಕಾಲೇಜಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರ ಶೈಕ್ಷಣಿಕ ಪ್ರಗತಿಗೆ ಉಪನ್ಯಾಸಕರ ಕೊರತೆ ಅಡ್ಡಿಯಾಗುತ್ತಿದ್ದು, ಬಡ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ವಿದ್ಯಾಲಯಗಳಲ್ಲಿ ಓದಲು ಆಗುವುದಿಲ್ಲ ನಾವು ಸರ್ಕಾರಿ ಕಾಲೇಜುಗಳನ್ನು ಆಶ್ರಯಿಸುತ್ತೇವೆ. ಕಾಲೇಜು ಪ್ರಾರಂಭೋತ್ಸವದಿಂದಲೂ ಹಿಡಿದು ಇತಿಹಾಸ ಉಪನ್ಯಾಸಕರ ಕೋರತೆ ಇದೆ. ಅತಿಥಿ ಉಪನ್ಯಾಸಕಾರನಾದರೂ ನೇಮಕ ಮಾಡಿಕೊಳ್ಳದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದರು. ಹೀಗಾದರೆ ನಾವು ಮುಂಬರುವ ವಾರ್ಷಿಕ್ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು? ಅಭ್ಯಾಸ ಇಲ್ಲದೆ ನಾವು ಕೇವಲ ಮೂಕ ಪ್ರೇಕ್ಷಕರಾಗಿದ್ದೇವೆ. ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ವಿದ್ಯಾರ್ಥಿಯಾದ ಮಾತನಾಡಿ ಕೆಲವೇ ತಿಂಗಳಲ್ಲಿ ಪರೀಕ್ಷೆಯ ಪ್ರಾರಂಭವಾಗಲಿದ್ದು ಇತಿಹಾಸ ಮತ್ತು ಕನ್ನಡ ಉಪನ್ಯಾಸಕರಿಲ್ಲದೆ ಶೈಕ್ಷಣಿಕ ಗುಣಮಟ್ಟಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಆದಕಾರಣ ಜಂಟಿ ಆಯುಕ್ತರು ಶಿಕ್ಷಣ ಇಲಾಖೆ ಇವರು ಶೀಘ್ರವಾಗಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಮುಖಂಡರಾದ ಅವಿನಾಶ್ ಪೂಜಾರಿ, ಸುರೇಶ್ ಪೂಜಾರಿ, ರಾಘವೇಂದ್ರ ಬೋವಿ,ಇಸ್ಮಾಯಿಲ್, ಮುಂತಾದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಸಾಯಬಣ್ಣ ಮಾದರ