ರಾಯಚೂರು: ರಾಯಚೂರಿನಲ್ಲಿ ದುರಂತವೊಂದು ಸಂಭವಿಸಿದೆ. ಆಟವಾಡುತ್ತಿದ್ದ ಮಕ್ಕಳ ಮೇಲೆ ಬೃಹತ್ ಬಂಡೆಯೊಂದು ಉರುಳಿ ಬಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಯಚೂರಿನ ಲಿಂಗಸಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಾಲೆಗಳಿಗೆ ರಜೆಯಿದ್ದ ಕಾರಣ ಮೂವರು ಮಕ್ಕಳು ಹೊಲದ ಬದುವಿಗೆ ಹಾಕಿದ್ದ ಬಂಡೆಯ ಸುತ್ತಮುತ್ತ ಆಟವಾಡುತ್ತಿದ್ದರು.ಈ ವೇಳೆ ಬೃಹತ್ ಬಂಡೆ ಮಕ್ಕಳ ಮೈಮೇಲೆ ಉರುಳಿದೆ.
ಬಂಡೆಯ ಅಡಿಯಲ್ಲಿ ಸಿಲುಕಿದ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕನ ಕಾಲು ಮುರಿದಿದೆ. 9 ವರ್ಷದ ಮಂಜುನಾಥ್ ಹಾಗೂ 8 ವರ್ಷದ ವೈಶಾಲಿ ಮೃತ ಮಕ್ಕಳು.
ಮನೆಯ ಅಂಗಳದಲ್ಲೇ ಮಕ್ಕಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.