ಬೀದರ್ : ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಪ್ರೇರಣೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ. ಇದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಧೈರ್ಯ ಮತ್ತು ಹುಮ್ಮಸು ಹೆಚ್ಚಾಗುವುದರೊಂದಿಗೆ ಉನ್ನತ ವ್ಯಾಸಂಗಕ್ಕೆ ಸ್ಪೂರ್ತಿ ನೀಡುತ್ತದೆ ಎಂದು ಬಸವಕಲ್ಯಾಣದ ತಹಸೀಲ್ದಾರರಾದ ಡಾ. ದತ್ತಾತ್ರೇಯ ಜೆ. ಗಾದಾರವರು ನುಡಿದರು.
ಅವರು ನಗರದÀ ಚೌಬಾರಾ ಬಳಿಯಿರುವ ಶ್ರೀ ಪಾಂಡುರAಗ ನಗರೇಶ್ವರ ಮಂದಿರದಲ್ಲಿ ಆರ್ಯ ವೈಶ್ಯ ಸಂಘ ಮತ್ತು ಶ್ರೀ ಕನ್ಯಕಾ ಪರಮೇಶ್ವರಿ ಮಿತ್ರಮಂಡಳಿ ಏರ್ಪಡಿಸಿದ ಎಸ್.ಎಸ್.ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಆಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತಿದ್ದರು.
ಇನ್ನೋರ್ವ ಮುಖ್ಯ ಅತಿಥಿ ಸ್ಪೂರ್ತಿಯ ಭಾಷಣಕಾರ್ತಿ ಕು. ಹರಿಕಾ ಮಂಜುನಾಥ ಮಾತನಾಡಿ, ಐತಿಹಾಸಿಕ ಪೌರಾಣಿಕ ಹಿನ್ನಲೆಯುಳ್ಳ ಬೀದರನಲ್ಲಿಯ ಶ್ರೀ ಪಾಂಡುರAಗ ಮಂದಿರದಲ್ಲಿ ಪಲ್ಲಕ್ಕಿ ಮೆರವಣಿಗೆ ಅನುಮತಿಗಾಗಿ ಆಗಿನ ನಿಜಾಮ ಸರ್ಕಾರದ ವಿರುದ್ಧ ರಸ್ತೆಯ ಮೇಲೇಯೆ ಕುಳಿತು ಸತ್ಯಾಗ್ರಹ ನಡೆಸಿ ಯಶಸ್ವಿಯಾದ ವಿಠೋಬಾ ಬಚ್ಚಾರವರು ಮತ್ತು ಇತರೆ ಸಮಾಜದ ಗಣ್ಯರುಗಳು ದುಡಿದು ಬೆಳೆಸಿರುವ ಮಂದಿರವಿದು. ಸಾಕ್ಷಾತ ಶ್ರೀ ಪಾಂಡುರAಗನೆ ಬಂದು ದಾಮೋಜಿ ಪಂಥರವರ ರಾಜಋಣ ತೀರಿಸಿ ಪ್ರತ್ಯಕ್ಷ ಪವಾಡ ಮೆರೆದ ಬೀದರ ನಗರವಿದು. ವಿದುರ ನಾಡು ಬಿದರಿ ಬೀದರ, ಅಟ್ಟಳೆಯ ನಾಳು, ಕ್ವಾಟಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಬೀದರ ವಿಶಿಷ್ಠ ಸ್ಥಾನ ಹೊಂದಿದೆ ಎಂದು ಹಾರಿಕಾ ಮಂಜುನಾಥ ವಿವರಿಸಿದರು.
ಆರ್ಯ ವೈಶ್ಯ ಸಂಘÀದ ಅಧ್ಯಕ್ಷ ಬಿ.ವಿ. ಸಿಂದೋಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವ ಅಧ್ಯಕ್ಷ ಅಶೋಕ ರೆಜೆಂತಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಾಥÀðನಾ ಸ್ವಾಗತಗೀತೆ ಹಾಡಿ ಕಾರ್ಯಕ್ರಮ ನಿರೂಪಿಸಿದರು. ಅನೀಲ ಪೋಲಾ ಆಶಯ ನುಡಿ ನುಡಿದರು. ಶ್ರೀ ಕನ್ಯಕಾ ಪರಮೇಶ್ವರಿ ಮಿತ್ರ ಮಂಡಳಿ ಅಧ್ಯಕ್ಷ ಸುನೀಲಕುಮಾರ ಗಂಧೆ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀನಿವಾಸ ಪೋಲಾ ವಂದಿಸಿದರು.
ಈ ಸಮಾರಂಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಆರ್ಯ ವೈಶ್ಯ ಮಹಿಳಾ ಮಂಡಳ, ವಾಸವಿ ಯುವತಿ ಸಂಘ, ವಾಸವಿ ಯುವಜನ ಸಂಘ, ವಾಸವಿ ಕಿಶೋರ ಸಂಘ, ವಾಸವಿ ಗೆಳೆಯರ ಬಳಗದ ಪದಾಧಿಕಾರಿ, ಕಾರ್ಯಕರ್ತರುಗಳು ಭಾಗವಹಿಸಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ್