ಹಾವೇರಿ:-ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇದೀಗ ರಾಜ್ಯ ಚುನಾವಣಾ ಆಯೋಗ ಅಧಿಕೃತ ದಿನಾಂಕ ಘೋಷಣೆ
ಮಾಡಿದೆ.ಇದೇ ತಿಂಗಳು ಅಕ್ಟೋಬರ್ 18 ರಿಂದ 25ರ ವರೆಗೆ ಚುನಾವಣಾ ಆಕಾಂಕ್ಷಿಗಳು ನಾಮ ನಿರ್ದೇಶನ ಮಾಡಬೇಕು ಎಂದು ಚುನಾವಣಾ ಆಯೋಗದ ತಿಳಿಸಿರುವಂತದ್ದು.ನವೆಂಬರ್ 13 ರಂದು ಚುನಾವಣೆ ನಡೆಸಲಾಗುತ್ತದೆ ಎಂದು ಆಯೋಗ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನವೆಂಬರ್ 23 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಲಾಗಿದೆ.ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.ಅಧಿಕೃತವಾಗಿ ಯಾವುದೇ ಪಕ್ಷದಿಂದ ನಿರ್ದಿಷ್ಟ ಅಭ್ಯರ್ಥಿ ಯನ್ನು ಆಯ್ಕೆ ಮಾಡಿಲ್ಲ ಎಂದು ತಿಳಿಸಲಾಗಿದೆ.ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಗೆ ಯಾಸಿರ್ ಅಹಮದ್ ಖಾನ್ ಪಟಾನ್ ಮತ್ತು ಅಜಂಪೀರ್ ಖಾದ್ರಿ ರವರ ಹೆಸರು ಅತ್ಯಂತ ಪ್ರಭಾವಿತವಾಗಿ ಓಡಾಡುತ್ತಿದೆ.
ಈ ಎರಡು ಪ್ರಬಲ ಅಭ್ಯರ್ಥಿಗಳ ನಡುವೆ ಟೀಕೆಟಿನ ಪರದಾಟ ನಡೆಯುತ್ತಿದೆ ಎನ್ನಲಾಗಿದೆ.ಬಿಜೆಪಿ ಪಕ್ಷದ ಸ್ಥಳೀಯ ನಾಯಕರಾದ ಶ್ರೀಕಾಂತ ದುಡ್ಡಿಗೌಡ್ರ ಭರತ್ ಬೊಮ್ಮಾಯಿ ಮುರುಗೇಶ್ ನಿರಾಣಿ ಇವರ ನಡುವೆ ಹಣಾಹಣಿ ಏರ್ಪಟ್ಟಿದೆ. ಇನ್ನು ಯಾವುದೇ ಪಕ್ಷದಿಂದ ಅಧಿಕೃತ ಹೆಸರು ಘೋಷಣೆ ಮಾಡಲಾಗಿಲ್ಲ.
ವರದಿ:- ರಮೇಶ್ ತಾಳಿಕೋಟಿ




