ಸೇಡಂ:- ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ(ರಿ) {ಮು: ಪೋ: ಬ್ಯಾಕೂಡ. ತಾಲೂಕ: ರಾಯಭಾಗ. ಜಿಲ್ಲಾ: ಬೆಳಗಾವಿ}ರವರು ೬೯ನೇ ಕರ್ನಾಟಕ ರಾಜ್ಯೋತ್ಸವ ಸುಸಂದರ್ಭದಲ್ಲಿ ಕನ್ನಡ ನಾಡಿನ ನೆಲ, ಜಲ, ಭಾಷೆ, ಮತ್ತು ಸಾಂಸ್ಕೃತಿಕ ನಿಟ್ಟಿನಲ್ಲಿ ಸಾಧನೆ ಗೈಯುತ್ತಿರುವ ಸಾಧಕ ಪ್ರತಿಭೆಗಳಿಗೆ ೧೦-೧೧-೨೦೨೪ ರಂದು,
ಧಾರವಾಡದಲ್ಲಿ ನಡೆಯುವ ಕನ್ನಡ ನಾಡು ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ನೀಡಲಾಗುವ ಸಾಹಿತ್ಯ ಕ್ಷೇತ್ರದ ಕನ್ನಡ ರಾಜ್ಯೋತ್ಸ ಪ್ರಶಸ್ತಿಗೆ ಶ್ರೀ ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿ ಮುಖ್ಯಗುರುಗಳು. ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಟಿ. ಬಿ. ಹಳ್ಳಿ ತಾಲೂಕ ಸೇಡಂ. ಜಿಲ್ಲಾ ಕಲಬುರಗಿರವರ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ಬ್ಯಾಕೂಡದ ಅಧ್ಯಕ್ಷರಾದ ಶ್ರೀ ಸಿದ್ರಾಮ. ಎಮ್. ನಿಲಜಗಿರವರು ತಿಳಿಸಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.




