ರಾಮದುರ್ಗ :-ತಾಲೂಕಿನ ತಾಲೂಕ್ ಪಂಚಾಯತಿಗೆ ಹೊಸದಾಗಿ ಆಗಮಿಸಿದ ಬಸವರಾಜ ಐನಾಪುರ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.

ಬಿಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ ತಾಲೂಕಿನ ದಂಡಾಧಿಕಾರಿಗಳಾದ ಪ್ರಕಾಶ್ ಹೊಳೆಪ್ಪಗೊಳ ಹಾಗೂ CITU ಸಂಘಟನೆ ಅಧ್ಯಕ್ಷರಾದ ಗೈಬು ಜೈನೆಖಾನ್ ಮತ್ತು ಉದುಪುಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯಿತಿಯ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಗ್ರಂಥಪಾಲಕರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಕೂಡಿಕೊಂಡು ಶ್ರೀ ಪ್ರವೀಣಕುಮಾರ್ ಶಾಲಿ ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ನೆರವೇರಿಸಿದರು.
ನಂತರ ಮಾತನಾಡಿದ ಮಾನ್ಯ ಪ್ರವೀಣ್ ಕುಮಾರ್ ಸಾಲಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯಿತಿ ರಾಮದುರ್ಗ ಇವರು ನವಂಬರ್ 2021 ರಂದು ತಾಲೂಕ್ ಪಂಚಾಯತ್ ಕಾರ್ಯಾಲಯ ರಾಮದುರ್ಗಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಹಳಿಯಾಳ ತಾಲೂಕು ಪಂಚಾಯಿತಿಯಿಂದ ವರ್ಗಾವಣೆಯಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿದರು ಅಮೃತ ತಾಲೂಕಿನಲ್ಲಿ ಸುದೀರ್ಘ ಮೂರು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ತಾಲೂಕಿನಲ್ಲಿಯ ವಿವಿಧ ಸಮಸ್ಯೆಗಳನ್ನು ಬಗೆಹರಿಸಿದ್ದು ತಾಲೂಕಿನಲ್ಲಿಯೇ ಬರಗಾಲ ಸಮೀಕ್ಷೆಯನ್ನು ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ ನೆರೆಗಾ ಯೋಜನೆ ಸ್‌ಬಿಎಂ ಎನ್ ಆರ್ ಎಲ್ ಎಂ ವಸತಿ ಯೋಜನೆ ಅಡಿ ಉತ್ತಮ ಪ್ರಗತಿ ಸಾಧಿಸುವಂತೆ ಎಲ್ಲಾಧಿಕಾರಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿ ಸಾಲು ಸಾಲು ಪ್ರಗತಿ ಪರಿಶೀಲನ ಸಭೆ ವಿಡಿಯೋ ಸಂವಾದಗಳ ಮೂಲಕ ಎಲ್ಲಾ ಅಧಿಕಾರಿ ವರ್ಗಕ್ಕೆ ಕೊಟ್ಟು ನಿಟ್ಟಿನ ಸೂಚನೆಗಳನ್ನು ನೀಡುತ್ತಾ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಈ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ್ ಪ್ರಕಾಶ್ ಹೊಳೆಪ್ಪಗೊಳ,ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ್,ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾಳಿಗಾರ, ಶ್ರೀ ಎಸ್ ಎಸ ಹಂದ್ರಾಳ, ಸಹಾಯಕ ನಿರ್ದೇಶಕರು ಶ್ರೀ ಅಪ್ಪಯ್ಯಪ್ಪ ಕುಂಬಾರ್, ಸಹಾಯಕ ನಿರ್ದೇಶಕರು ಶ್ರೀ ರಾಜಶೇಖರ್ ಹಿರೇಮಠ್,ಸಹಾಯಕ ನಿರ್ದೇಶಕರು ಹಾಗೂ ತಾಲೂಕ್ ಪಂಚಾಯತಿಗಳು ಎಲ್ಲ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರೂ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕಲಾದಗಿ




