Ad imageAd image

ಆನ್ಲೈನ್ ಗೇಮಿಂಗ್ ನಿಷೇಧಕ್ಕೆ.!’ನಮ್ಮ ಕರ್ನಾಟಕ ಸೇನೆ’ಸಂಘಟನೆ ಒತ್ತಾಯ.!

Bharath Vaibhav
ಆನ್ಲೈನ್ ಗೇಮಿಂಗ್ ನಿಷೇಧಕ್ಕೆ.!’ನಮ್ಮ ಕರ್ನಾಟಕ ಸೇನೆ’ಸಂಘಟನೆ ಒತ್ತಾಯ.!
WhatsApp Group Join Now
Telegram Group Join Now

ಸಿಂಧನೂರು : –ಸಮಾಜದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿರುವ ಆನ್ಲೈನ್ ಗೇಮ್ ರಮ್ಮಿ ಬೆಟ್ಟಿಂಗ್ ರಾಜ್ಯದಲ್ಲಿ ನಿಷೇಧ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ರಾಯಚೂರು ತಹಸಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ
ಯುವಕರು ಮತ್ತು ವಿದ್ಯಾರ್ಥಿಗಳು ಅತೀ ಹೆಚ್ಚು ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಗಳಿಗೆ ಸಿಲುಕಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.

ಈ ಆನ್ಲೈನ್ ಗೇಮಿಂಗ್. ರಮ್ಮಿ ಬೆಟ್ಟಿಂಗ್ ಒಂದು ಚಟುವಟಿಕೆಯಾಗಿ ವ್ಯಾಪಕವಾಗಿ ಹರಡಿದೆ ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ ಹಾಗೂ ಹಲವಾರು ವಿದ್ಯಾರ್ಥಿಗಳು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ನಿರ್ದೇಶನವಿದೆ ಮೊಬೈಲ್ ಆಪ್ ಮೂಲಕ ಸರಳವಾಗಿ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳು ಯುವಕರು ಈ ಆನ್ಲೈನ್ ಗೇಮ್. ರಮ್ಮಿ ಮತ್ತು ಬೆಟ್ಟಿಂಗ್ ನಲ್ಲಿ ಸಿಲುಕಿಕೊಂಡು ಹಣ ಕಳೆದುಕೊಂಡು ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ.ಈಗಾಗಲೇ ಹಲವು ಕಡೆ ಪೊಲೀಸ್ ಠಾಣೆಯಲ್ಲಿ ಅನಾದಿಕೃತವಾಗಿ ಬೆಟ್ಟಿಂಗ್ ವ್ಯವಸ್ಥೆಯ ಬಗ್ಗೆ ದೂರುಗಳು ದಾಖಲಾಗುತ್ತಿದ್ದು ಆನ್ಲೈನ್ ಗೇಮ್ ಬುಕ್ಕಿಗಳ ಮೇಲೆ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರಿಸಬೇಕು ಇದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಬೇಕೆಂದು ಆಗ್ರಹಿಸಿ ರಾಯಚೂರು ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ – ರಾಜ್ಯ ಕಾರ್ಯಧ್ಯಕ್ಷ. ಉಮೇಶ್ ಗೌಡ. ಜಿಲ್ಲಾಧ್ಯಕ್ಷ – ಕೆ. ಕೊಂಡಪ್ಪ – ತಾಲೂಕ ಅಧ್ಯಕ್ಷ – ಮಂಜುನಾಥ ಗಾಣಿಗೇರ್ ಸಿಂಧನೂರು – ಹುಸೇನ್ ಬಾಷಾ – ಪ್ರವೀಣ್ ಕುಮಾರ್ – ಶಿವರಾಜ್ ನಾಯಕ್ – ಎಂ. ವೆಂಕಟೇಶ್ – ಶಿವನಗೌಡ ನಾಯಕ್ – ವಿಜಯ್. ಇನ್ನಿತರರು ಇದ್ದರು

ವರದಿ: – ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!