Ad imageAd image

ಅದ್ದೂರಿಯಾಗಿ ಆಚರಣೆ ಮಾಡಬೇಕಿದ್ದ ವಾಲ್ಮೀಕಿ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತ.

Bharath Vaibhav
ಅದ್ದೂರಿಯಾಗಿ ಆಚರಣೆ ಮಾಡಬೇಕಿದ್ದ ವಾಲ್ಮೀಕಿ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತ.
WhatsApp Group Join Now
Telegram Group Join Now

ಮೊಳಕಾಲ್ಮುರು :– ಭಾರತದ ಎರಡು ಮಹಾನ್ ಕಾವ್ಯಗಳಲ್ಲಿ ಒಂದಾದ ರಾಮಾಯಣ ಕೃತಿಯನ್ನು ರಚಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷವೂ ಆಚರಿಸಲಾಗುವುದು ವಾಲ್ಮೀಕಿ ರಾಮಾಯಣ ಕಲ್ಪವೃಕ್ಷವಿದ್ದಂತೆ ಮನುಕುಲಕ್ಕೆ ಬೇಕಾದ ಆದರ್ಶಗಳು ಸಾಮಾಜಿಕ ಮೌಲ್ಯಗಳು ಈ ಮಹಾ ಕಾವ್ಯದಲ್ಲಿವೆ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಆಡಳಿತ ಸೌಧ ಆವರಣದಲ್ಲಿ ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಭರತ ಖಂಡದ ಆದಿ ಕವಿ ಎಂದೇ ಪ್ರಸಿದ್ಧವಾದ ರಾಮಾಯಣ ವಾಲ್ಮೀಕಿ ಮನುಕುಲದ ವಿಕಾಸವನ್ನು ತನ್ನ ಒಡಲೊಳಗೆ ಇಟ್ಟು ಮನುಷ್ಯ ಚರಿತ್ರೆಯನ್ನು ರೂಪಗಳಲ್ಲಿ ಜಗತ್ತಿಗೆ ಸಾರಿದ ಮಹಾನ್ ಸಂತ ವಾಲ್ಮೀಕಿ ಎಂದರು ಇಂತಹ ಮಹಾನ್ ದಾರ್ಶಾನಿಕ ಜಯಂತಿಯನ್ನು ಪಾಲ್ಗೊಂಡು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದರು. ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನವನ್ನು ಉದ್ಘಾಟನೆ ಮಾಡಿ ಅದ್ದೂರಿ ಕಾರ್ಯಕ್ರಮವನ್ನು ಮಾಡೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಜಗದೀಶ್ ವಾಲ್ಮೀಕಿ ಮಹಾ ಕವಿ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಒಟ್ಟಿನಲ್ಲಿ ವಾಲ್ಮೀಕಿ ಜಯಂತಿ ಇಡೀ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಡೊಳ್ಳು ವಾದ್ಯ ಕುಣಿತಗಳೊಂದಿಗೆ ಆಚರಿಸುತ್ತಿದ್ದ ಜಯಂತಿಯು ಕೇವಲ ಸರ್ಕಾರಿ ಕಾರ್ಯಕ್ರಮ ವಾಗಿರುವುದು ದುರಂತವೇ ಸರಿ ತಾಲೂಕಿನಲ್ಲಿ ಅತಿ ಹೆಚ್ಚು ವಾಲ್ಮೀಕಿ ಸಮಾಜದವರಿದ್ದು ಕೂಡ ಕೇವಲ ಬೆರಳೆಣಿಕೆಯಷ್ಟು ಸಮಾಜದ ಮುಖಂಡರು ವಾಲ್ಮೀಕಿ ಜಯಂತಿ ಆಚರಣೆ ಮಾಡಿರುವುದು ಬೇಸರದ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ, ವಾಲ್ಮೀಕಿ ಮುಖಂಡರಾದ ಮಾರ್ನಾಯಕ ಜಗಳೂರಯ್ಯ ದೇವಯ್ಯ ಮುರಳಿಧರ ನಾಯಕ ನಾಗಸಮುದ್ರ ಗೋವಿಂದಪ್ಪ ಬಡೋ ಬಯ್ಯ ಅಬ್ದುಲ್ಲ ಪಟೇಲ್ ಜಿ ಪಾಪು ನಾಯಕ್ ಜಿಪಿ ಸುರೇಶ್ ನಾಯಕ ಸಮಾಜದ ಯುವ ಮುಖಂಡರಾದ ಬಿ ವಿಜಯ್, ಭೀಮಣ್ಣ, ಗಂಗಾಧರ, ಸಿದ್ದಣ್ಣ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ- ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!