Ad imageAd image

ಮಹಿಳೆ ಸಶಕ್ತರಾದರೆ ರಾಷ್ಟ್ರ ಸದೃಢವಾಗೋದರಲ್ಲಿ ಸಂಶಯವೇ ಇಲ್ಲ : ಜಯಂತ ಪೂಜಾರಿ.

Bharath Vaibhav
ಮಹಿಳೆ ಸಶಕ್ತರಾದರೆ ರಾಷ್ಟ್ರ ಸದೃಢವಾಗೋದರಲ್ಲಿ ಸಂಶಯವೇ ಇಲ್ಲ : ಜಯಂತ ಪೂಜಾರಿ.
WhatsApp Group Join Now
Telegram Group Join Now

ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

ಭಾಲ್ಕಿ : ಪಟ್ಟಣದ ಶ್ರೀರಾಮ ಮಂದಿರ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ (ರಿ). ಭಾಲ್ಕಿ ವತಿಯಿಂದ ಆಯೋಜಿಸಿದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಜರಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಜಯಂತ ಪೂಜಾರಿ ಅವರು ಮಾತನಾಡಿ ೨೦ ರಿಂದ ೨೫ ಸ್ವ-ಸಹಾಯ, ಪ್ರಗತಿಬಂಧು ಸಂಘಗಳ ಸದಸ್ಯರ ಮೇಲೆ ತಮ್ಮನ್ನು ಒಕ್ಕೂಟ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರನ್ನಾಗಿ ನಿಯೋಜನೆ ಮಾಡಿರುವ ಸಂಸ್ಥೆ ನಿಮಗೆ ಸಶಕ್ತ ಸಬಲೀಕರಣ ಗೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದೆ ಮಾತೆಯರು ತಮ್ಮ ಜವಾಬ್ದಾರಿಯನ್ನು ಅರಿತು ನಿಮ್ಮಲಿರುವ ಗುಂಪುಗಳ ಜೊತೆ ಉತ್ತಮ ಒಡನಾಟ ಬೆಳೆಸಿಕೊಂಡು ತಾವುಗಳು ಮುಖ್ಯ ವಾಹಿನಿಗೆ ಬರಬೇಕು ಅನ್ನುವುದೇ ಪೂಜ್ಯ ಅಪ್ಪಗಳಾದ ವೀರೇಂದ್ರ ಹೆಗ್ಗಡೆ ಅವರ ಹಾಗೂ ತಾಯಿ ಹೇಮಾವತಿ ಅಮ್ಮನವರ ಕನಸು ಎಂದರು,

ಮುಂದುವರೆದು ಮಾತನಾಡಿದ ಅವರು ತಾವು ಸಶಕ್ತರಾಗಿ ಬೆಳೆದಲ್ಲಿ ನಿಮ್ಮ ಜೊತೆ ಒಂದಿಷ್ಟು ಮಹಿಳೆಯರನ್ನ ಮುಖ್ಯ ವಾಹಿನಿಗೆ ತಂದರೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಅಷ್ಟೇಯಲ್ಲಾ ಭವ್ಯ ಭಾರತ ರಾಷ್ಟ್ರ ಸದೃಢಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳುವಳಿಕೆ ನುಡಿಗಳನ್ನು ನುಡಿದು ಮಾತೆಯರಲ್ಲಿ ಸ್ಫೂರ್ತಿ ತುಂಬಿದರು.

ಬೀದರ ಜಿಲ್ಲಾ ನೀರ್ದೇಶಕರಾದ ಪ್ರವೀಣಕುಮಾರ ಮಾತನಾಡಿ ಸಂಸ್ಥೆಯ ಕಾರ್ಯಕ್ರಮಗಳು ಜೊತೆಗೆ ಆರ್ಥೀಕ ವ್ಯವಹಾರ ಅತ್ಯಂತ ಪಾರದರ್ಶಕವಾಗಿದೆ ಎಂದು ತಿಳಿ ಹೇಳಿದರು ಅದಲ್ಲದೆ ಒಂದು ಒಕ್ಕೂಟದ ಪದಾಧಿಕಾರಿಯು ತನ್ನ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಂಡರೆ ನಿಮಗೆ ಸಂಸ್ಥೆ ಎಷ್ಟು ದೊಡ್ಡ ಶಕ್ತಿ ನೀಡಿದೆ ತಾವು ಜನರನ್ನ ಹೇಗೆ ಜಾಗೃತೆ ಮಾಡಬಹುದು ಎಂಬುದರ ಬಗ್ಗೆ ಮನವರಿಕೆ ಆಗ್ತದೆ ಎಂದರು. ಸಂಸ್ಥೆಯ ಯೋಜನೆಗಳು ಆರ್ಥೀಕ ವ್ಯವಹಾರದ ಜೊತೆಗೆ ಸಾಮಾಜಿಕವಾಗಿ ಮಾಡುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅದರಲ್ಲಿ ಮುಖ್ಯವಾಗಿ ಸುಜ್ಞಾನನಿಧಿ, ಕೆರೆ ಅಭಿವೃದ್ಧಿ, ನಿರ್ಗತಿಕರಿಗೆ ಮಾಸಾಶನಾ, ವಾತ್ಸಲ್ಯ ಮನೆ, ಶ್ರದ್ಧಾ ಕೇಂದ್ರ, ಸ್ವಚ್ಚತೆ, ವ್ಯಸನ ಮುಕ್ತ ಸಮಾಜ ಹೀಗೆ ಯೋಜನೆಯ ಅನೇಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಬೀದರ ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶಿವು ಲೋಖಂಡೆ ಅವರು ಸಭೆಯನ್ನು ಉದ್ದೇಶಿಸಿ ಧರ್ಮಸ್ಥಳ ಯೋಜನೆಗಳು ಬಡವರಿಗೆ ಪಾಲಿಗೆ ಕಲ್ಪ ವೃಕ್ಷವಾಗಿವೆ ನಿಸ್ವಾರ್ಥ ಮನೋಭಾವದಿಂದ ಪೂಜ್ಯರು ಈ ಸಂಸ್ಥೆ ಹುಟ್ಟಿಸಿದ್ದು ನಮ್ಮ ನಿಮ್ಮೆಲ್ಲರ ಏಳಿಗೆಗೆ ಎಂದು ಹರ್ಷ ವ್ಯಕ್ತ ಪಡಿಸಿದರು.

ತಾಲೂಕಿನ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಅಮರ ಬಿರಾದಾರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ ಯೋಜನೆಯು ಬ್ಯಾಂಕಿನ ಸೇವೆಗಳನ್ನು ಬ್ಯಾಂಕಿನ ಪ್ರತಿನಿಧಿಯಾಗಿ ಗ್ರಾಮೀಣ ಜನರಿಗೆ ಎಲ್ಲಾ ಬ್ಯಾಂಕ್ ಸೌಲಭ್ಯಗಳನ್ನು ಸುಲಭವಾಗಿ ತಲುಪಿಸುವ ಕೆಲಸ ಮಾಡುತ್ತಿದೆ, ಸಂಸ್ಥೆಯು ಸಂಘದ ಸದಸ್ಯರಿಗೆ ಬ್ಯಾಂಕಿನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿರುವ ಬಗ್ಗೆ ಮತ್ತು ಬ್ಯಾಂಕ ನೀರ್ವಹಿಸುವ ಅನೇಕ ಕೆಲಸಗಳನ್ನ ಯೋಜನೆಯು ಜನಸಾಮಾನ್ಯರಿಗೆ ಮುಟ್ಟಿಸುತ್ತೀರುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಜನಜಾಗೃತಿ ಮಾಧ್ಯಮ ಸಲಹೆಗಾರರಾದ ಸಂತೋಷ ಬಿ. ಜಿ. ಪಾಟೀಲ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಆರೋಗ್ಯ, ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಮಹತ್ತರ ಕಾರ್ಯಗಳ ವಿಷಯಗಳನ್ನು ಪ್ರಸ್ತಾಪಿಸುತ್ತ, ಈ ಸಮಾಜದಿಂದ ನಾವು ಎಲ್ಲವನ್ನು ಪಡೆದಿದ್ದೇವೆ ನಾವು ಬೆಳೆದರೇ ಸಾಲದು ನಮ್ಮ ಅಕ್ಕ ಪಕ್ಕದ ಮನೆಯವರು ನಮ್ಮ ಗ್ರಾಮದ ಹತ್ತಾರು ಕುಟುಂಬ ಬೆಳೆಯುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಮಾಡಬೇಕಿದೆ ಜೊತೆಗೆ ಸಂಸ್ಥೆಯ ವಿಷಯ ಬಂದಾಗ ಹೆಮ್ಮೆಯಿಂದ ನಮಗೆ ಆದ ಲಾಭಗಳು ಅದರ ಮಹತ್ವವನ್ನು ಜನ ಸಾಮಾನ್ಯರಿಗೆ ತಿಳಿಹೇಳಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನೀಲಕುಮಾರ ಎಸ್. ಎಸ್. ಅವರ ವಿಡಿಯೋ ಕಾನಫರೆನ್ಸ ಮುಖಾಂತರ ಸಂಸ್ಥೆಯು ನಡೆಸುತ್ತಿರುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಸರ್ವೋತ್ತಮ ಮಾಹಿತಿ ನೀಡಿದರು.

ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಸಂಕೇತಿಕವಾಗಿ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನೆಯನ್ನು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಜಿಲ್ಲಾ ಸದಸ್ಯರಾದ ಸೋಮನಾಥಪ್ಪ ಅಷ್ಟೂರೆ, ಶಿವರಾಜ ಮಲ್ಲೇಶಿ, ದೀಪಕ ಠಮಕೆ, ಸೇರಿದಂತೆ ತಾಲೂಕಿನ ಯೋಜನಾಧಿಕಾರಿ ಸಂತೋಷ, ಮೇಲ್ವಿಚಾರಕರಾದ ಮಲ್ಲಿಕಾರ್ಜುನ, ಆನಂದ, ಜಯಸುಧಾ, ಸಬೀನಾ, ಸುಜಾತಾ, ಮಹಾಂತೇಶ್, ಗುರುರಾಜ, ಶ್ರೀಕಾಂತ, ಪೀರಪ್ಪ, ಅರುಣಕುಮಾರ, ಸೇವಾ ಪ್ರತಿನಿಧಿಗಳು, ಸಿ.ಎಸ್.ಸಿ ಸೇವಾದಾರರು ಮತ್ತು ಒಕ್ಕೂಟ ಪದಾಧಿಕಾರಿಗಳು ಭಾಗವಹಿಸಿದ್ದರು. ಶಿವಾನಂದ ನಿರೂಪಿಸಿದರು ಲಾಯಪ್ಪ ವಂದಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!