Ad imageAd image

ಜೆಡಿಎಸ್ ಗೆ ನಾವು ಪುನರ್ಜನ್ಮ ನೀಡಿದ್ದೇವೆ, ಹೆಚ್.ಡಿ.ಕೆ ಟಿಕೆಟ್ ತ್ಯಾಗ ಮಾಡಲಿ : ಶಾಸಕ ಯತ್ನಾಳ್ 

Bharath Vaibhav
ಜೆಡಿಎಸ್ ಗೆ ನಾವು ಪುನರ್ಜನ್ಮ ನೀಡಿದ್ದೇವೆ, ಹೆಚ್.ಡಿ.ಕೆ ಟಿಕೆಟ್ ತ್ಯಾಗ ಮಾಡಲಿ : ಶಾಸಕ ಯತ್ನಾಳ್ 
YATNAL
WhatsApp Group Join Now
Telegram Group Join Now

ಹುಬ್ಬಳ್ಳಿ: ಚನ್ನಪಟ್ಟಣ ಉಪಚುನಾವಣೆ ಕದನ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜೆಡಿಎಸ್ ಗೆ ನಾವು ಪುನರ್ಜನ್ಮ ನೀಡಿದ್ದೇವೆ. ಹಾಗಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಟಿಕೆಟ್ ತ್ಯಾಗ ಮಾಡಲಿ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಸಿ.ಪಿ.ಯೋಗೇಶ್ವರ್ ಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಸಹಾಯ ಬೇಕು.

ನಮ್ಮ ಶಕ್ತಿ ಕುಮರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಲೋಕಸಭೆಯಲ್ಲಿ ನಮಗೆ ಅನುಕೂಲವಾಗಿದೆ. ಜೆಡಿಎಸ್ ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ.

ಹಾಗಾಗಿ ಎರಡೂ ಕಡೆಯವರಿಗೆ ಲಾಭವಾಗಿದೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯ. ಕುಮಾರಸ್ವಾಮಿಯವರು ಟಿಕೆಟ್ ತ್ಯಾಗ ಮಾಡಬೇಕು ಎಂದರು.

ಇದೇ ವೇಳೆ ಶಿಗ್ಗಾಂವಿ ಟಿಕೆಟ್, ಸಂಸದ ಬಸವರಾಜ್ ಬೊಮ್ಮಾಯಿ ಪುತ್ರನಿಗೆ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಬೊಮ್ಮಾಯಿ ಅವರನ್ನು ಯಾಕೆ ಎಳೆಯುತ್ತೀರಿ? ಅವರದ್ದೇನೂ ತಪ್ಪಿಲ್ಲ.

ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಮೊದಲು ಇದು ಪಾಲನೆಯಾಗಬೇಕು. ಬೊಮ್ಮಾಯಿ ಅವರನ್ನು ಯಾಕೆ ಬಲಿಪಶು ಮಾಡ್ತೀರಿ? ಎಲ್ಲರಿಗೂ ಕೊಟ್ಟಮೇಲೆ ಅವರು ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ. ನಮ್ಮ ಪಕ್ಷದ ಹಿರಿಯರು ಈ ಬಗ್ಗೆ ನಿರ್ಣಯ ಮಾಡುತ್ತಾರೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!