Ad imageAd image

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ 

Bharath Vaibhav
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ 
WhatsApp Group Join Now
Telegram Group Join Now

ಬೆಳಗಾವಿ :  ಶಾಲೆ, ಹೋಟೆಲ್​ ಹಾಗೂ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಿನ್ನೆ (ಅಕ್ಟೋಬರ್ 19) ಒಂದೇ ದಿನ ವಿವಿಧ ವಿಮಾನ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಇದರಲ್ಲಿ ಚೆನ್ನೈ-ಬೆಳಗಾವಿ ವಿಮಾನವು ಸಹ ಸೇರಿದೆ.

ಚೆನ್ನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಮೇಲ್​ ಬಂದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು, ಇ-ಮೇಲ್​ ಎಲ್ಲಿಂದ ಬಂದಿದೆ ಎನ್ನುವುದನ್ನು ತನಿಖೆ ನಡೆಸಿದ್ದಾರೆ.

ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿ ಏರ್​ಪೋರ್ಟ್​ ಅಥಾರಿಟಿಗೆ ಮೇಲ್ ಬಂದಿದೆ. ಹೀಗಾಗಿ ಬೆಳಗಾವಿಗೆ ಚೆನೈನಿಂದ ವಿಮಾನ ಸಂಪರ್ಕ ಕಡಿತಗೊಳಸಲಾಗಿದೆ.

ಇನ್ನು ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ ಮೇಲ್ ಎಲ್ಲಿಂದ ಬಂದಿದೆ? ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!